Site icon Vistara News

Shivamogga News: ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ನೆರವು ನೀಡಲು ಕ್ರಮ: ಡಿ.ಎಸ್. ಅರುಣ್

Good Luck Care Centre shivamogga MLC D.S. Arun

#image_title

ಶಿವಮೊಗ್ಗ: “ಅನಾಥರು, ಬುದ್ಧಿಮಾಂದ್ಯರು ಸೇರಿದಂತೆ ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡುತ್ತಿರುವ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ (Good Luck Care Centre) ಅಗತ್ಯವಿರುವ ನೆರವು ನೀಡಲು ಕ್ರಮ ವಹಿಸುತ್ತೇನೆ” ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಶಿವಮೊಗ್ಗ ನಗರದ ಕಲ್ಲಹಳ್ಳಿಯಲ್ಲಿರುವ ಅನಾಥರು, ಬುದ್ಧಿಮಾಂದ್ಯರ, ಅಶಕ್ತರ ಕೇಂದ್ರ, ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿ ಮಾತನಾಡಿ, “ಸಂತ್ರಸ್ತರಿಗೆ ಅಗತ್ಯವಾದ ದಾಖಲೆ ಸಿದ್ಧಪಡಿಸಿಕೊಡುವ ಕೆಲಸ, ಮಾಸಾಶನದ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ದಿನ ಅಗತ್ಯವಿರುವ ರೇಷನ್, ವೈದ್ಯಕೀಯ ವ್ಯವಸ್ಥೆ ಹಾಗೂ ವಸತಿ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.

ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ್ ಮಾತನಾಡಿ, “ಶಿವಮೊಗ್ಗದ ಸಹೃದಯ ನಾಗರಿಕರ ಸಹಕಾರದಿಂದ ದಿನ ನಿತ್ಯ ಬೇಕಾದ ಎಲ್ಲ ವ್ಯವಸ್ಥೆ ನಡೆಯುತ್ತಿದೆ. ಮುಖ್ಯವಾಗಿ ತನ್ನದೇ ಸೂರಿನ ಅಗತ್ಯವಿದ್ದು, ಇದರ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: North East Election Results: ತ್ರಿಪುರಾ, ಮೇಘಾಲಯದಲ್ಲಿ ಹಂಗ್? ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎಗೆ ಮುನ್ನಡೆ

ಆರೈಕೆ ಕೇಂದ್ರದ ನಿರ್ದೇಶಕ ವಸಂತ ಹೋಬಳಿದಾರ ಮತ್ತು ಜಿ.ವಿಜಯ ಕುಮಾರ್ ಅವರು ಆರೈಕೆ ಕೇಂದ್ರದ ಸಮಗ್ರ ಮಾಹಿತಿಯನ್ನು ಶಾಸಕರಿಗೆ ನೀಡಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸ್ಥಳೀಯರಾದ ಕೆ.ಪಿ.ಶೆಟ್ಟಿ, ಶರವಣ ಮತ್ತು ಸುಂದರ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ವಂದನಾರ್ಪಣೆ ನಡೆಸಿಕೊಟ್ಟರು.

Exit mobile version