ರಿಪ್ಪನ್‌ಪೇಟೆ: ಪಟ್ಟಣದ ಗವಟೂರು ಗ್ರಾಮದ ಹೊಸನಗರ ರಸ್ತೆಯಲ್ಲಿ ನೂತನವಾಗಿ ತೆರೆಯಲು ಹೊರಟಿರುವ ನೂತನ ಮದ್ಯದ ಅಂಗಡಿಗೆ (liquor shop) ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಗವಟೂರು ಗ್ರಾಮದ ಹೊಸನಗರ ರಸ್ತೆಯಲ್ಲಿನ ಖಾಸಗಿ ಕಟ್ಟಡವೊಂದರಲ್ಲಿ ನೂತನವಾಗಿ ಸಿಎಲ್ 7 ಮದ್ಯದ ಅಂಗಡಿ ತೆರೆಯಲು ಸರ್ಕಾರದಿಂದ ಲೈಸೆನ್ಸ್ ದೊರೆತ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮದ್ಯದ ಲೋಡ್ ಅನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದರು.
ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮದ್ಯ ತುಂಬಿದ್ದ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.
ಇದನ್ನೂ ಓದಿ: Tata Altroz : ಟಾಟಾ ಆಲ್ಟ್ರೋಜ್ನಲ್ಲಿ ಎರಡು ಹೊಸ ವೇರಿಯೆಂಟ್ಗಳ ಪರಿಚಯ; ಏನೇನಿವೆ ಫೀಚರ್ಗಳು?
ಪುನಃ ಶನಿವಾರ ಬೆಳಗ್ಗೆಯಿಂದಲೇ ಗವಟೂರು ಗ್ರಾಮದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂಭಾಗದಲ್ಲಿ ನೆರೆದು, ಯಾವುದೇ ಕಾರಣಕ್ಕೂ ನಮ್ಮ ಗವಟೂರು ಗಾಮದಲ್ಲಿ ನೂತನ ಮದ್ಯದಂಗಡಿ ಪ್ರಾರಂಭಿಸಬಾರದು ಎಂದು ಪಟ್ಟು ಹಿಡಿದರು.
ನಮಗೆ ಸರ್ಕಾರದಿಂದ ಲೈಸೆನ್ಸ್ ದೊರೆತಿದ್ದು, ಆ ಹಿನ್ನೆಲೆಯಲ್ಲಿ ಬಾರ್ ತೆರೆಯಲು ಮುಂದಾಗಿದ್ದೇವೆ. ಅಬಕಾರಿ ಆಯುಕ್ತರು ಖುದ್ದು ಸ್ಥಳ ಪರಿಶೀಲನೆಯ ಬಳಿಕವೇ ಸನ್ನದು ನೀಡಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ನೀಡಬೇಕೆಂದು ನೂತನ ಬಾರ್ ಮಾಲೀಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Team India : ಐರ್ಲೆಂಡ್ ಸರಣಿಗೆ ಜಸ್ಪ್ರೀತ್ ಬುಮ್ರಾ ಅಲ್ಲ ನಾಯಕ, ಸ್ಫೋಟಕ ಬ್ಯಾಟರ್ಗೆ ನೇತೃತ್ವ
ಸ್ಥಳಕ್ಕೆ ಡಿವೈಎಸ್‌ಪಿ ಭೇಟಿ
ನೂತನವಾಗಿ ವೈನ್ ಬಾರ್ ತೆರೆಯಲು ಸಿದ್ಧತೆ ನಡೆಸಿರುವ ಸ್ಥಳಕ್ಕೆ ಡಿವೈಎಸ್‌ಪಿ ಗಜಾನನ ವಾಮನಸುತರ ಭೇಟಿ ನೀಡಿ, ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ, ಸ್ಥಳಕ್ಕೆ ಅಬಕಾರಿ ಜಿಲ್ಲಾಧಿಕಾರಿಯನ್ನು ಕರೆಸುವ ಭರವಸೆ ನೀಡಿದರು.