Site icon Vistara News

Shivamogga News: ತಡರಾತ್ರಿ ಮನೆಗೆ ನುಗ್ಗಿ ಹುಲಿ ದಾಳಿ; ಮಲಗಿದ್ದ ವ್ಯಕ್ತಿಗೆ ಗಂಭೀರ ಗಾಯ

Man death in tiger attack in Nittur village

ಸಾಗರ :ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹುಲಿಯೊಂದು ದಾಳಿ (Tiger attack) ನಡೆಸಿ ಗಂಭೀರ ಗಾಯಗೊಳಿಸಿದ (Serious injury) ಘಟನೆ ಬುಧವಾರ ತಡರಾತ್ರಿ ಮರಾಠಿ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಶರಾವತಿ ಹಿನ್ನೀರು ಪ್ರದೇಶವಾದ ಎಸ್.ಎಸ್.ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ ಗ್ರಾಮದ ಕಂಚಿಕೇರಿ ನಿವಾಸಿ ಗಣೇಶ್ ಅವರು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದರು.ತಡರಾತ್ರಿ 2 ಗಂಟೆ ಸುಮಾರಿಗೆ ಹುಲಿಯೊಂದು ಮನೆಯೊಳಗೆ ನುಗ್ಗಿದೆ. ಆಗ ಮಲಗಿದ್ದ ಗಣೇಶ್ ಅದರ ಕಣ್ಣಿಗೆ ಬಿದ್ದಿದೆ. ಸೀದಾ ಹುಲಿಯು ಗಣೇಶ್‌ ಅವರ ಮೇಲೆ ದಾಳಿ ನಡೆಸಿದೆ. ಅವರ ಮೈಕೈಗೆ ಪರಚಿ, ಕಚ್ಚಿ ಗಾಯಗೊಳಿಸಿದೆ.

ಮೊದಲಿಗೆ ಗಣೇಶ್‌ ಅವರಿಗೆ ಏನಾಗುತ್ತಿದೆ ಎಂಬುದೇ ಗೊತ್ತಾಗಿಲ್ಲ. ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಆಗ ಅದಕ್ಕೆ ಹೆದರಿದ ಹುಲಿಯು ಅಲ್ಲಿಂದ ಓಡಿ ಹೋಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮರಾಠಿ ಗ್ರಾಮದಲ್ಲಿ ಹುಲಿ ಕಾಟ ಜಾಸ್ತಿಯಾಗಿದ್ದು, ಆಗಾಗ ಜನವಸತಿ ಪ್ರದೇಶಕ್ಕೆ ನುಗ್ಗುವ ಹುಲಿಗಳು ಐದಾರು ನಾಯಿಯನ್ನು ತಿಂದು ಹಾಕಿದೆ. ಜಾನುವಾರುಗಳ ಮೇಲೆ ಸಹ ದಾಳಿ ನಡೆಸುತ್ತಲಿದೆ.

ಇದನ್ನೂ ಓದಿ: Gururaj Gantihole : ಸಡನ್ನಾಗಿ ಉರುಳಿದ ಮರ; ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಬಚಾವ್‌

ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹುಲಿ ಕಾಟದಿಂದ ಗ್ರಾಮಸ್ಥರು ಮನೆಯೊಳಗೆ ವಾಸಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ಶಾಸಕರು ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Exit mobile version