ಶಿವಮೊಗ್ಗ: “ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಮ್ಮ ಯುವ ಜನತೆಯ ಪಾತ್ರ ಮಹತ್ತರವಾಗಿದೆ” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗ ಮಂದಿರದಲ್ಲಿ ಗುರುವಾರ (ಫೆ.೧೬) ಆಯೋಜಿಸಲಾಗಿದ್ದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: B L Shankar : ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿದ ಬಿ ಎಲ್ ಶಂಕರ್
“ನಮ್ಮ ದೇಶವು ಯುವ ಶಕ್ತಿಯಿಂದ ಸಂಪದ್ಭರಿತವಾಗಿದೆ. ಜನಸಂಖ್ಯೆಯಲ್ಲಿಯೂ ಪ್ರಪಂಚದಲ್ಲಿ ಮೊದಲ ಸ್ಥಾನ ಪಡೆದ ದೇಶವೆಂದು ಘೋಷಣೆಯಾಗಲಿದೆ. ಅತ್ಯಂತ ಹೆಚ್ಚು ಯುವ ಜನತೆಯನ್ನು ಹೊಂದಿರುವ ನಮ್ಮ ರಾಷ್ಟ್ರ ದಿಂದ ಪ್ರಪಂಚಕ್ಕೆ ಉತ್ತಮ ಮಾನವ ಸಂಪನ್ಮೂಲ ದೊರೆಯಲಿದೆ. 21ನೇ ಶತಮಾನದಲ್ಲಿ ತಂತ್ರಜ್ಞಾನ ಬಳಕೆ, ಇ-ಗವರ್ನೆನ್ಸ್, ಕ್ಷಿಪ್ರತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಸುಸ್ಥಿರ ಮತ್ತು ಉತ್ತಮ ಆರ್ಥಿಕತೆ ಕಡೆಗೆ ನಮ್ಮ ದೇಶ ಹೆಜ್ಜೆ ಹಾಕುತ್ತಿದ್ದು, ಈ ಬಾರಿಯ ಜಿ-20 ರಾಷ್ಟ್ರಗಳ ಶೃಂಗಸಭೆಯು ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆ ತರುವ ವಿಚಾರ. ಒಂದು ವರ್ಷ ಕಾಲ ಅನೇಕ ರಾಷ್ಟ್ರಗಳನ್ನು ಆಹ್ವಾನಿಸಿ, ಜನರ ಪಾಲ್ಗೊಳ್ಳುವಿಕೆಯಿಂದ ಉತ್ತಮ ಚರ್ಚೆ, ಕಾರ್ಯಕ್ರಮಗಳು ನಡೆಯಲಿವೆ. ಭೂಮಿ, ಪರಿಸರ ಮಾಲಿನ್ಯ ನಿಯಂತ್ರಣ, ಆರ್ಥಿಕತೆ ಇತರೆ ಆದ್ಯತೆಯ ವಿಚಾರಗಳು ಚರ್ಚೆಯಾಗಲಿವೆ. ಜತೆಗೆ ಜಗತ್ತಿಗೆ ನಮ್ಮ ದೇಶ, ಸಂಪನ್ಮೂಲದ ಪರಿಚಯ ಆಗಲಿದೆ” ಎಂದರು.
ಇದನ್ನೂ ಓದಿ: Rishika Sharma: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಹಾಲ್-ರಿಷಿಕಾ ಶರ್ಮಾ
“ಯುವ ಶಕ್ತಿ ಒಂದು ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಯುವ ಜನತೆ ನೀಡುವ ಸಲಹೆಗಳಿಗೆ ಸರ್ಕಾರ ಗಮನ ನೀಡಲಿದೆ. ನಮ್ಮ ಪ್ರಧಾನಿಯವರು ನೀಡುವ ಸಲಹೆಗಳನ್ನು ಇಂದು ಜಗತ್ತು ಒಪ್ಪುತ್ತಿದೆ. ಟಾಪ್ 5 ದೇಶಗಳಲ್ಲಿ ನಮ್ಮ ರಾಷ್ಟ್ರ ಇದ್ದು, ನಮ್ಮ ಯುವ ಜನತೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು” ಎಂದು ಆಶಿಸಿದರು.
ಇದನ್ನೂ ಓದಿ: Ravindra Jadeja : ನನ್ನನ್ನು ಸರ್ ಎಂದು ಕರೆಯುವುದು ಇಷ್ಟವಿಲ್ಲ ಎಂದ ಸ್ಪಿನ್ನರ್ ರವೀಂದ್ರ ಜಡೇಜಾ
10ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಜಿ20 ಅಧ್ಯಕ್ಷತೆ ವೈ 20 ಯುವ ಸಭೆ ಹಾಗೂ ಮಿಷನ್ ಲೈಫ್ ಮತ್ತು ಇಂಟರ್‌ನ್ಯಾಷನಲ್ ಇಯರ್ ಆಫ್ ಮಿಲೆಟ್ಸ್ ಕುರಿತು ಪಿಪಿಟಿ ಪ್ರದರ್ಶನದೊಂದಿಗೆ ವಿಷಯವನ್ನು ಪ್ರಸ್ತುತಪಡಿಸಿದರು.
ನವದೆಹಲಿಯ ಸಂಸತ್ತಿನಲ್ಲಿ ಭಾಷಣ ಮಾಡಿದ್ದ ಸುಪ್ರದ, ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಶಾಲಿನಿ, ಹಸ್ಮಿತಾ ತಸ್ಮಿ, ಮೇಘನಾ ಹಾಗೂ ನೆಹರು ಯುವ ಕೇಂದ್ರದಿಂದ ಯುವ ಸಂಘಗಳಿಗೆ ಸ್ಪೋರ್ಟ್ಸ್ ಕಿಟ್ ಮತ್ತು ಡೊಳ್ಳು ಕುಣಿತ ತಂಡಕ್ಕೆ ಈ ವೇಳೆ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್ ಕುಮಾರ್ ಎಸ್.ಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ರಂಗಾಯಣದ ಆಡಳಿತಾಧಿಕಾರಿ ಶೈಲಜಾ ಎ.ಸಿ., ಕುವೆಂಪು ವಿವಿ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್, ಪರಿಸರ, ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕುಮಾರ ಸ್ವಾಮಿ ಬಿ.ಎಂ, ಸಹಾಯಕ ಪ್ರಾಧ್ಯಾಪಕಿ (ಆಯುರ್ವೇದ) ಡಾ.ಹರ್ಷಿತ್ ಕೆ.ಜೆ, ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ವಿಲಿಯಂ ಡಿಸೋಜ ಪಾಲ್ಗೊಂಡಿದ್ದರು.