Site icon Vistara News

Shivamogga News: ಪ್ರಶಸ್ತಿ, ಸನ್ಮಾನಗಳಿಂದ ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆ: ರವಿ ಹೆಗಡೆ

Senior journalist Ravi Hegde spoke at the 10th anniversary program of Surabhivani newspaper in Soraba

ಸೊರಬ: ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಮಾಜ ತಿದ್ದುವ ಕೆಲಸದಲ್ಲಿ ನಿರತರಾಗುವಂತೆ ಪ್ರೇರಣೆ ನೀಡುವ ಕೆಲಸವನ್ನು ಪ್ರಶಸ್ತಿ (Award), ಸನ್ಮಾನಗಳು ಮಾಡುತ್ತವೆ ಎಂದು ಹಿರಿಯ ಪತ್ರಕರ್ತ ರವಿ ಹೆಗಡೆ ಹೇಳಿದರು.

ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ಸುರಭಿ ಸೇವಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ ಸುರಭಿಶ್ರೀ ರಾಜ್ಯ ಪ್ರಶಸ್ತಿ ಸ್ವೀಕರಿಸಿ, ಸುರಭಿವಾಣಿ ಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿದವರು ಜವಾಬ್ದಾರಿಯನ್ನು ಹೊತ್ತು ಸರಿ ದಾರಿಯಲ್ಲಿ ನಡೆದಾಗ ಪ್ರಶಸ್ತಿಗಳಿಗೆ ಅರ್ಥ ಮೂಡುತ್ತದೆ ಮತ್ತು ಅದರ ಆಶಯದಂತೆ ನಡೆದುಕೊಳ್ಳುವುದು ಪುರಸ್ಕೃತರ ಜವಾಬ್ದಾರಿಯೂ ಆಗಿದೆ. ಗ್ರಾಮೀಣ ಮಟ್ಟದಿಂದ ಬೆಳೆದ ಒಂದು ಪತ್ರಿಕೆ ದಶಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕ; ಒಟ್ಟು ಎಷ್ಟು ಹುದ್ದೆ ನಿರೀಕ್ಷೆ?

ಶಿಕಾರಿಪುರ ತಾಲೂಕು ದುಗ್ಲಿ ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆತ್ಮಕ್ಕೆ ಎಂದಿಗೂ ಸಾವಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ಸಮಾಜದ ಒಳಿತಿಗಾಗಿ ದುಡಿದಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಕ್ಷಣಿಕ ಜೀವನದಲ್ಲಿ ಸಾರ್ಥಕ ಬದುಕಿನೆಡೆಗೆ ನಡೆಯಲು ಗುರುವಿನ ಆಶೀರ್ವಾದವೂ ಲಭ್ಯವಾಗಬೇಕು. ಆಗ ಮಾತ್ರ ಬದುಕನ್ನು ಸರಿದಾರಿಗೆ ತರಲು ಸಾಧ್ಯ. ಇದಕ್ಕೆ ಧಾರ್ಮಿಕ ಚಿಂತನೆ ಬೆಳೆಸಿಕೊಂಡು ಆತ್ಮವನ್ನು ಭಗವಂತನ ಪಾದಕ್ಕೆ ಅರ್ಪಿಸಿದಾಗ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.

ಸುರಭಿವಾಣಿ ದಶಮಾನೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಮೌಢ್ಯವನ್ನು ಅಳಿಸಿ ಮೌಲ್ಯವನ್ನು ಬಿತ್ತುವ ಕಾರ್ಯ ಪತ್ರಿಕೆಗಳಿಂದ ಮಾತ್ರ ಸಾಧ್ಯವಾಗುತ್ತಿದೆ. ಸಮಾಜದಲ್ಲಿನ ಒಳಿತು- ಕೆಡುಕುಗಳನ್ನು ಬಿತ್ತರಿಸುವ ಪತ್ರಿಕೆಗಳಿಂದ ಆಸ್ವಾದಿಸುವ ಮತ್ತು ಯಾವುದನ್ನು ಗ್ರಹಿಸಬೇಕು ಎನ್ನುವ ಮನೋಧರ್ಮ ನಮ್ಮ ಮೇಲಿದೆ ಎಂದರು.

ಇದನ್ನೂ ಓದಿ: Fishermen Rescued: ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಬೋಟ್‌ ಪತ್ತೆ; 27 ಮೀನುಗಾರರ ರಕ್ಷಣೆ

ಕಾರ್ಯಕ್ರಮದಲ್ಲಿ ಹೊನ್ನಾವರ ಶ್ರೀ ಕ್ಷೇತ್ರ ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್, ಯೋಧ ಎನ್. ಜಗದೀಶ, ಡಾ. ಗಂಗಾಧರ ವ.ಮ. ಆತ್ರೇಯ ಸಾಗರ, ಅರುಣ್ ವಿನಾಯಕ ಶೇಟ್ ಹೊಸಾಡು (ಇಳಕಲ್), ಎನ್.ವಿ. ಈರೇಶ್ ಶಿಕಾರಿಪುರ, ಬಿ.ವಿ. ಗಣಪತಿ ಭಟ್ ಬೆಂಗಳೂರು, ರಾಜು ಎಂ. ರೇವಣಕರ್ ರಾಣೇಬೆನ್ನೂರು, ಮಹೇಂದ್ರಕುಮಾರ ಜೈನ್ ಶಿರಾಳಕೊಪ್ಪ, ಪ್ರದೀಪ್ ಎಲ್ಲನಕರ ಶಿರಸಿ, ಸತ್ಯನಾರಾಯಣ ರಾಯ್ಕರ್ ದಾವಣಗೆರೆ, ಸಂತೋಷ್ ಮಧುಕರ ಶೇಟ್ ಶಿರಸಿ, ಬಸವನಗೌಡ ಎಂ. ಮಲ್ಲಾಪುರ, ಗಜಾನನ ಎಸ್. ಅಣ್ವೇಕರ್ ಹುಬ್ಬಳ್ಳಿ ಅವರಿಗೆ ಸುರಭಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: karnataka Weather :‌ ಮುಂದಿನ 24 ಗಂಟೆಯಲ್ಲಿ 18 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಈ ವೇಳೆ ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾಕರ, ಟ್ರಸ್ಟ್‌ನ ನಾರಾಯಣಭಟ್ ಮರಾಠ, ಯು.ಎಲ್. ಸಂದೀಪ್, ವಾಣಿಶ್ರೀ ಉಪಸ್ಥಿತರಿದ್ದರು. ಸುರಭಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಜಿ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್. ಷಣ್ಮುಖಾಚಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version