Site icon Vistara News

Shivamogga News: ಅಡಿಕೆ ವರ್ತಕರ ಪರವಾನಿಗೆ ರದ್ದು ಆದೇಶಕ್ಕೆ ಖಂಡನೆ; ಸಿಎಂ ಗೆ ಮನವಿ

Condemnation of order canceling license of arecanut traders memorandum to cm

ಸಾಗರ: ಎಪಿಎಂಸಿಯಲ್ಲಿ (APMC) ವ್ಯವಹರಿಸುತ್ತಿರುವ ಅಡಿಕೆ ವರ್ತಕರ (Areca nut Traders) ಪರವಾನಿಗೆ (License) ರದ್ದುಪಡಿಸಲು ಕೃಷಿ ಸಚಿವರು (Agriculture Minister) ಹೊರಡಿಸಿರುವ ಆದೇಶವನ್ನು ಖಂಡಿಸಿ, ತಕ್ಷಣ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಗುರುವಾರ ಅಡಿಕೆ ವರ್ತಕರ ಸಂಘದಿಂದ ಎಪಿಎಂಸಿ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿಗಳಿಗೆ (CM) ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಡಿಕೆ ಚೇಂಬರ್ ರಾಜ್ಯ ಉಪಾಧ್ಯಕ್ಷ ಅಶ್ವಿನಿಕುಮಾರ್, ಎಪಿಎಂಸಿಯಿಂದ ಕೃಷಿ ಸಚಿವರ ಸೂಚನೆ ಮೇರೆಗೆ ಈಚೆಗೆ ಸಾಗರ ಎಪಿಎಂಸಿ ವರ್ತಕರಿಗೆ ನೀವು ಸರಿಯಾಗಿ ವಹಿವಾಟು ನಡೆಸುತ್ತಿಲ್ಲ. ನಿಮ್ಮ ಪರವಾನಿಗೆಯನ್ನು ಏಕೆ ವಜಾ ಮಾಡಬಾರದು ಎಂದು ನೋಟಿಸ್ ಜಾರಿಗೊಳಿಸಲಾಗಿದೆ. ಸಾಗರ ಎಪಿಎಂಸಿಯಲ್ಲಿ 100ಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ನೀಡಿರುವುದು ಖಂಡನೀಯ.

ವಹಿವಾಟು ನಡೆಸುವುದು ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ನಾವು ಪರವಾನಿಗೆ ಪಡೆಯುವಾಗ ಹಣ ಕಟ್ಟಿ, ಬ್ಯಾಂಕ್ ಗ್ಯಾರೆಂಟಿ ಕೊಟ್ಟಿರುತ್ತೇವೆ. ಎಪಿಎಂಸಿಯಿಂದ 10ವರ್ಷಗಳ ಅವಧಿಯ ಲೈಸೆನ್ಸ್ ಕೊಡಲಾಗಿದೆ. ಟೆಂಡರ್‍ನಲ್ಲಿ ಭಾಗವಹಿಸುವುದು ಬಿಡುವುದು ವರ್ತಕರ ಹಕ್ಕು. ಸರ್ಕಾರಕ್ಕೆ ಆದಾಯ ಸಂಗ್ರಹ ಆಗಬೇಕು ಎನ್ನುವ ನಿಟ್ಟಿನಲ್ಲಿ ವರ್ತಕರು ವಹಿವಾಟು ಕಡ್ಡಾಯವಾಗಿ ನಡೆಸಬೇಕು ಎಂದು ನೋಟಿಸ್ ಮೂಲಕ ಹೇರಿಕೆ ಮಾಡುವ ಕ್ರಮವನ್ನು ಸಂಘ ತೀವೃವಾಗಿ ಖಂಡಿಸುತ್ತದೆ. ತಕ್ಷಣ ವರ್ತಕರಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Shivamogga News: ಸಾಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ; ಆರೋಪಿ ಬಂಧನ

ಸಂಘದ ಅಧ್ಯಕ್ಷ ಕೆ.ಬಸವರಾಜ್ ಮಾತನಾಡಿ, ಸಾಗರ ಎಪಿಎಂಸಿಯಲ್ಲಿ ವರ್ತಕರಿಗೆ ಲೈಸೆನ್ಸ್ ರದ್ದುಗೊಳಿಸುವ ನಿಟ್ಟಿನಲ್ಲಿ ನೀಡಿರುವ ನೋಟಿಸ್ ಅವೈಜ್ಞಾನಿಕವಾಗಿದೆ. ಕೆಲವು ವರ್ತಕರು ಕೊರೋನಾ ಸಂದರ್ಭದಲ್ಲಿ ಅಡಿಕೆ ವಹಿವಾಟು ನಡೆಸಲು ಆಗಲಿಲ್ಲ. ಆದರೆ ವರ್ತಕರು ಪ್ರಾಂಗಣದ ಜೊತೆ ನಿರಂತರ ಸಂಪರ್ಕ ಇರಿಸಿ ಕೊಂಡಿದ್ದಾರೆ. ವರ್ತಕರು ವ್ಯಾಪಾರ ಮಾಡಿಲ್ಲ ಎನ್ನುವುದನ್ನು ಬಿಟ್ಟರೆ ಅವ್ಯವಹಾರ ನಡೆಸಿಲ್ಲ. ಇದನ್ನೆ ಆಧಾರವಾಗಿರಿಸಿಕೊಂಡು ಲೈಸೆನ್ಸ್ ರದ್ದು ಮಾಡಲು ಮುಂದಾಗಿರುವ ಕ್ರಮ ಖಂಡನೀಯ ಎಂದರು.

ಬಳಿಕ ಎಪಿಎಂಸಿ ಮಾಜಿ ನಿರ್ದೇಶಕ ವೆಂಕಟೇಶ್ ಮಾತನಾಡಿದರು.

ಇದನ್ನೂ ಓದಿ: Shivamogga News: ಕಬಡ್ಡಿಯಲ್ಲಿ ಗುಡ್ ಶೆಫರ್ಡ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಈ ವೇಳೆ ಅಡಿಕೆ ವರ್ತಕರ ಸಂಘದ ಅಮಿತ್ ಹೆಗಡೆ, ಕೆ.ಎನ್.ನಿರಂಜನ, ಕೆ.ಸಿ.ಸುರೇಶ್, ಶಶಿಧರ್ ಎಂ.ಎಸ್., ಸುಂದರ ಸಿಂಗ್, ಕುಮಾರ್, ಹನೀಫ್ ಕುಂಜಾಲಿ, ಮಂಜಣ್ಣ, ಬಿ.ಎಚ್.ಲಿಂಗರಾಜ್, ಎಸ್.ಎಚ್.ಸೊರಟೂರ, ರಶೀದ್, ವಿನಾಯಕ ಇನ್ನಿತರರು ಹಾಜರಿದ್ದರು.

Exit mobile version