ಶಿವಮೊಗ್ಗ: ಶ್ರೀರಾಮಚoದ್ರಾಪುರ ಮಠದ 35ನೇ ಪೀಠಾಧಿಪತಿಗಳಾಗಿದ್ದ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿ ಅವರ ಆರಾಧನಾ ಮಹೋತ್ಸವದ ದಿನವಾದ ಬುಧವಾರ, ಶ್ರೀಗಳ ಜೀವನದ ಕುರಿತು ಸoಕ್ಷಿಪ್ತವಾಗಿ ಪರಿಚಯಿಸುವ ವಿದ್ವಾನ್ ಜಗದೀಶ ಶರ್ಮಾ ಸoಪ ರಚನೆಯ ʼದಿವ್ಯ ಜೀವನʼ ಪುಸ್ತಕವನ್ನು ಶ್ರೀಸoಸ್ಥಾನದವರ ಉಪಸ್ಥಿತಿಯಲ್ಲಿ ಹೊರನಾಡಿನ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಅವರು ಲೋಕಾರ್ಪಣೆಗೊಳಿಸಿದರು.
ಸೊರಬದ ಕೆರೆಕೊಪ್ಪದ ಸೋಮಶೇಖರ್ ಕಾಶೈನ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಮ್ಮುಖದಲ್ಲಿ ʼದಿವ್ಯ ಜೀವನʼ ಪುಸ್ತಕ ಬಿಡುಗಡೆ ಮಾಡಲಾಯಿತು.
ಮಾನವ ಜನ್ಮ ದುರ್ಲಭವಾದುದು. ಪೂರ್ವಾರ್ಜಿತ ಪುಣ್ಯ ಸಂಚಯದಿಂದ ಮಾತ್ರ ಮಾನವ ಜನ್ಮ ಲಭಿಸುವುದು. ಆದುದರಿಂದ ಮಾನವನು ತನ್ನ ಕರ್ತವ್ಯಗಳನ್ನು ಸಮರ್ಥರೀತಿಯಲ್ಲಿ ಪಾಲಿಸಬೇಕು. ಸಮರ್ಪಣಾ ಭಾವನೆಯಿಂದ ನಿರ್ವಹಿಸಬೇಕು. ದೇಹವಿರುವವರೆಗೂ ಕರ್ತವ್ಯದ ಹೊಣೆ ಇದ್ದೇ ಇರುವುದು. ಇoತಹ ಹತ್ತು ಹಲವು ಸoದೇಶಗಳ ಜೊತೆಗೆ ಆದಿಶಂಕರರ ಅವಿಚ್ಛಿನ್ನ ಪರಂಪರೆಯಾದ ಶ್ರೀರಾಮಚಂದ್ರಾಪುರಮಠದ 35 ಪೀಠಾಧಿಪತಿಗಳಾಗಿದ್ದ ಶ್ರೀಶ್ರೀ ರಾಘವೇಂದ್ರಭಾರತೀ ಸ್ವಾಮಿಗಳ ಜೀವನದ ಕಿರುಚಿತ್ರಣ ನೀಡುವ ಅಮೂಲ್ಯ ಕೃತಿಯೇ ದಿವ್ಯ ಜೀವನ ಕೃತಿಯಾಗಿದೆ.
ಇದನ್ನೂ ಓದಿ | Bhagavad Gita Abhiyan: ಬೆಳಗಾವಿಯಲ್ಲಿ ಡಿ.23ರಂದು ಭಗವದ್ಗೀತೆ ಮಹಾಸಮರ್ಪಣೆ
ಭಗವದ್ಗೀತೆ, ಭೀಷ್ಮ, ವಿದುರ, ದಶಕಂಠ ರಾವಣ, ಚಾಣಕ್ಯ, ಧರ್ಮ ಮುoತಾದ 25 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಪ್ರಸಿದ್ಧ ಲೇಖಕರಾದ ವಿದ್ವಾನ್ ಜಗದೀಶಶರ್ಮಾ ಸoಪ ಅವರ ಮೊದಲ ಕೃತಿಯ ಮರುಮುದ್ರಣ ಇದಾಗಿದೆ. ಪುಸ್ತಕದ ಪ್ರತಿಗಳಿಗಾಗಿ ಶ್ರೀಪುಸ್ತಕಮ್ (9591542454) ಸoಪರ್ಕಿಸಬಹುದು.
ನಮ್ಮ ಪರಮಪೂಜ್ಯ ಗುರುವರ್ಯರು (ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳು) ಯತಿನಿವಹದಲ್ಲಿ ಗೌರವಾರ್ಹರು. ಶ್ರೀಪೀಠವನ್ನು ಪರಂಪರೆಯ ಮೌಲ್ಯದಂತೆ ಮುನ್ನೆಡೆಸಿದವರು. ಅಧ್ಯಯನ- ಅನುಭವಗಳಿಂದ ಪರಿಪೂರ್ಣರು. ತಪೋನಿಷ್ಠಾನ ನಿರತರು, ಶಿಷ್ಯವತ್ಸಲರು.
| ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ