ಶಿವಮೊಗ್ಗ : ʻʻಮದುವೆಯು ಕುಟುಂಬದ ಸಂಬಂಧಗಳ ಬೆಳವಣಿಗೆಯ ನಿರ್ಣಾಯಕದ ಅಂಶವಾಗಿದೆ. ಸಮಾಜದಲ್ಲಿ ಕುಟುಂಬವು ಒಂದು ಮಾದರಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಕುಟುಂಬದ ಸಹಕಾರ ರೂಪವೇ ಸಮಾಜದ ಬೆಳವಣಿಗೆಗೆ ಮುಖ್ಯ ತಳಹದಿʼʼ ಎಂದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಹೇಳಿದರು.
ಸೊರಬ ತಾಲ್ಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಡಾ.ವಿಶ್ವನಾಥ್ ನಾಡಿಗೇರ್ ಕುಟುಂಬದಿಂದ ನಿರ್ಮಿಸಲ್ಪಟ್ಟ ಶ್ರೀ ರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ನಿರ್ಮಾಣಗೊಂಡ ಶಿವ ಸನ್ನಿಧಿ ಕಲ್ಯಾಣ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲುಶಿತಗೊಳ್ಳುತ್ತಿರುವ ಸಮಾಜವನ್ನು ಸರಿದಾರಿಗೆ ತರಲು ಮಠ, ಮಂದಿರ ಮತ್ತು ಕುಟುಂಬ ವ್ಯವಸ್ಥೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತವೆ. ಸತ್ಸಂಗ ಮತ್ತು ಸಮಾಜಮುಖಿ ಕಾರ್ಯ ನಡೆಸಲು ಶಿವ ಸನ್ನಿಧಿ ಸಹಕಾರಿಯಾಗಲಿ ಶುಭ ಹಾರೈಸಿದರು.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಉದ್ಯಮಿ ವಿ.ವಿ. ಕಾಮತ್, ಹಿರಿಯ ಕೃಷಿಕ ಗಣೇಶ್ ರಾವ್ ನಾಡಿಗೇರ್, ಡಾ: ಶ್ರೀದೇವಿ ನಾಡಿಗೇರ್ ಉಪಸ್ಥಿತರಿದ್ದರು.
ಇದನ್ನು ಓದಿ | ಮುಸ್ಲಿಂ ಯುವತಿಯ ಜತೆ ಮದುವೆ: ಹಿಂದೂ ಯುವಕನ ಕೊಲೆ