Site icon Vistara News

Road Accident: ಚಿನ್ನಮನೆ ಸಮೀಪ ಬಸ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಸಾವು

Head-on collision between bus and bike near Chinnamane Bike rider death

ರಿಪ್ಪನ್‌ಪೇಟೆ: ಬಸ್ (Bus) ಹಾಗೂ ಬೈಕ್ (Bike) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ (Bike Rider) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಯನೂರು ಸಮೀಪದ ಚಿನ್ನಮನೆಯಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ಹಾರೋಹಿತ್ತಲು ನಿವಾಸಿ ಗುರುಮೂರ್ತಿ(36) ಮೃತ ದುರ್ದೈವಿಯಾಗಿದ್ದಾನೆ. ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬಜಾಜ್ ಡಿಸ್ಕವರ್ ಬೈಕ್ ಹಾಗೂ ರಿಪ್ಪನ್‌ಪೇಟೆ ಕಡೆಯಿಂದ ಆಯನೂರು ಕಡೆಗೆ ತೆರಳುತಿದ್ದ ಖಾಸಗಿ ಬಸ್ ನಡುವೆ ಚಿನ್ನಮನೆ ಗ್ರಾಮದ ಕೆರೆ ಬಳಿಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version