Site icon Vistara News

Hosanagara News: ಎಳ್ಳಮವಾಸ್ಯೆ ಜಾತ್ರೆ; ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Ellamavasye Jatre Special Puja at Sri Rameshwar Temple of Sri Kshetra Ramatheertha

ಹೊಸನಗರ: ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ (Sri Rameshwar Temple) ಗುರುವಾರ 11 ನೇ ವರ್ಷದ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶರ್ಮಿಣ್ಯಾವತಿ ನದಿಯಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು. ಸುತ್ತಮುತ್ತಲ ಗ್ರಾಮಗಳಾದ ಹುಗುಡಿ, ಮಳಲಿಕೊಪ್ಪ, ಗರ್ತಿಕೆರೆ, ಕೋಡೂರು, ಕರಿಗೆರಸು, ಕುನ್ನೂರು, ನೆಣೆಬಸ್ತಿ, ಕಲ್ಲುಕೊಪ್ಪ, ನಂದಿಗ, ಜಂಬಳ್ಳಿ, ಹೊಳೆಕೇವಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಆಗಮಿಸಿದ ಭಕ್ತರು ನದಿಯಲ್ಲಿ ತೀರ್ಥಸ್ನಾನ ಮಾಡಿ, ಬಳಿಕ ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Business guide : ನೀವು ಮಾಸ್ಟರ್‌ ಆಗಬೇಕಿದ್ದರೆ, ಕಲಿಸುವ ಬದ್ಧತೆಯನ್ನು ಮರೆಯದಿರಿ

ಬೆಳಗ್ಗೆಯಿಂದ ಸಾರ್ವಜನಿಕ ತೀರ್ಥಸ್ನಾನ, ಕೆಂಜಿಗಾಪುರದ ಅರ್ಚಕ ಶ್ರೀಧರ ಭಟ್ ಅವರಿಂದ ಶ್ರೀ ಗಣಪತಿ ಪೂಜೆ, ಪುಣ್ಯಾಹ ಮತ್ತು ಕಲಾತತ್ವ ಹೋಮ ಹಾಗೂ ಹಾಲಂದೂರು ಶ್ರೀಧರ್ ಭಟ್, ದೇವಸ್ಥಾನದ ನಿತ್ಯ ಪೂಜೆ ಅರ್ಚಕ ಎ.ವಿ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ಪ್ರಸಾದ ವಿನಿಯೋಗ ನೆರವೇರಿತು ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ಹೊಳೆ ದೀಪೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಇದನ್ನೂ ಓದಿ: ಕಾಲಲ್ಲಿ ಬೌಲಿಂಗ್​, ಕೈ ಇಲ್ಲದಿದ್ದರೂ ಬ್ಯಾಟಿಂಗ್​; ​ಪ್ರತಿಯೊಬ್ಬರಿಗೂ ಸ್ಫೂರ್ತಿ ಈ ಕಾಶ್ಮೀರಿ ಯುವಕ

ಈ ವೇಳೆ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳಾದ ಎಚ್.ಜಿ ಶೇಖರಪ್ಪ, ಗಂಗಾಧರ, ಕರುಣಾಕರ, ಗಿರೀಶ್, ಶಶಿಕುಮಾರ್, ಚಂದ್ರಶೇಖ‌ರ್, ಶೇಖರಪ್ಪ, ಚಂದ್ರಕಲಾ, ನಾಗರಾಜ್, ಕೊಲ್ಲೂರಪ್ಪ, ಕೃಷ್ಣಯ್ಯ, ರಾಘವೇಂದ್ರ, ಅಚ್ಚುತಾಚಾರ್ಯ, ಉಮೇಶ್, ಜಯಂತ್ ಕೆ.ವೈ, ಸಂತೋಷ್, ನಾಗೇಶ್, ಗೀತಾ, ಲಲಿತಮ್ಮ ಮತ್ತಿತರರು ಪಾಲ್ಗೊಂಡಿದ್ದರು.

Exit mobile version