ಹೊಸನಗರ: ಅಕ್ರಮ ಮರಳು ಸಾಗಾಟ (Illegal Sand Transportation) ಮಾಡುತಿದ್ದ ಎರಡು ವಾಹನಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಪಟ್ಟಣಕ್ಕೆ ಸಮೀಪದ ಎಡಚಿಟ್ಟೆ ಗ್ರಾಮದಲ್ಲಿ ಜರುಗಿದೆ.
ಸೋಮವಾರ ತಡರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಪಟ್ಟಣಕ್ಕೆ ಸಮೀಪದ ಎಡಚಿಟ್ಟೆ ಗ್ರಾಮದ ಇಂಡೇನ್ ಗ್ಯಾಸ್ ಗೋಡಾನ್ ಸಮೀಪ ಅಕ್ರಮ ಮರಳು ಸಾಗಾಣಿಕೆಗೆ ಯತ್ನಿಸಿದ್ದ ವಾಹನಗಳನ್ನು ಹೊಸನಗರ ವಲಯ ಡಿಆರ್ಎಫ್ಓ ಯುವರಾಜ್, ಅರಣ್ಯ ರಕ್ಷಕ ರಮೇಶ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: CM Siddaramaiah: ಕಳ್ಳತನ ಪ್ರಕರಣ ಹೆಚ್ಚಾದರೆ ಡಿಸಿಪಿಗಳೇ ನೇರ ಹೊಣೆ: ಸಿಎಂ ಸಿದ್ದರಾಮಯ್ಯ
ಪಿಕ್ಅಪ್ ಮಾಲೀಕ ದ್ಯಾವರ್ಸ ಅಭಿಷೇಕ್ ಹಾಗೂ ಟಿಪ್ಪರ್ ಮಾಲೀಕ ಪರಮೇಶ್ವರ ಅವರ ವಿರುದ್ದ ಅಕ್ರಮ ಮರಳು ಸಾಗಾಟ ಕುರಿತಂತೆ ಇಲ್ಲಿನ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.