Site icon Vistara News

Hosanagara News: ಅಕ್ರಮ ಮರಳು ಸಾಗಾಟ; 4 ಟಿಪ್ಪರ್ ಲಾರಿ ವಶ

Illegal sand transporting 4 tipper lorries seized

ಹೊಸನಗರ: ಅಕ್ರಮವಾಗಿ ಮರಳು (Sand) ಸಾಗಾಟ ಮಾಡುತ್ತಿದ್ದ ನಾಲ್ಕು ಟಿಪ್ಪರ್‌ ಲಾರಿಗಳನ್ನು ಹೊಸನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವ ಘಟನೆ (Hosanagara News) ನಡೆದಿದೆ.

ಹೊಸನಗರ ಪೊಲೀಸ್‌ ಠಾಣೆಯ ಪಿಎಸ್‌ಐ ರಾಜರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, 4 ಟಿಪ್ಪರ್‌ ಲಾರಿಗಳನ್ನು ವಶ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Sugar Side Effects: ನಾವು ಒಂದು ದಿನದಲ್ಲಿ ಹೆಚ್ಚೆಂದರೆ ಎಷ್ಟು ಸಕ್ಕರೆ ಸೇವಿಸಬಹುದು?

ಅಕ್ರಮ ಮರಳು ತುಂಬಿಕೊಂಡು ಸಾಗಿಸುತ್ತಿರುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಿನೇಶ ಮುಡುಬಾ, ಸುರೇಂದ್ರ, ರಮೇಶ್ ಬಾಣಿಗ, ಸುರೇಶ್ ಎಂಬುವವರಿಗೆ ಸೇರಿದ ಒಟ್ಟು 4 ಟಿಪ್ಪರ್‌ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಠಾಣೆಯ ಸಿಬ್ಬಂದಿಗಳಾದ ಅವಿನಾಶ್, ಸುನೀಲ್, ಗಂಗಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version