Site icon Vistara News

Hosanagara News : ತಕ್ಷಣವೇ ಕಲ್ಲು ಗಣಿಗಾರಿಕೆ ನಿಲ್ಲಿಸಲು ಕುಂಭತ್ತಿ ಗ್ರಾಮಸ್ಥರ ಮನವಿ

#image_title

ಹೊಸನಗರ: ತಾಲೂಕಿನ ಕುಂಭತ್ತಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಸರ್ಕಾರ ಇಲ್ಲಿ ಸ್ಫೋಟ ನಡೆಸದಂತೆ ಆದೇಶಿಸಿದೆಯಾದರೂ ಅದನ್ನು ಧಿಕ್ಕರಿಸಿ ಕಾರ್ಯಾಚರಣೆ ನಡೆಯುತ್ತಿದೆ. ಏಪ್ರಿಲ್‌ 4ರಂದು ಆದೇಶವನ್ನು ಧಿಕ್ಕರಿಸಿ ದೊಡ್ಡ-ದೊಡ್ಡ ಕುಣಿಗಳನ್ನು ತೆಗೆದು ಬ್ಲಾಸ್ಟ್ ಮಾಡಲಾಗಿದೆ. ಈ ಸ್ಫೋಟದಿಂದ ಅಕ್ಕ-ಪಕ್ಕದ ಸುಮಾರು 30-40 ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ರಾಮಚಂದ್ರಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಕ್ಮಿಣಿ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಹೊಸನಗರದ ತಹಶೀಲ್ದಾರ್ ಧರ್ಮಂತ ಗಂಗಾರಾಮ್ ಕೋರಿಯವರಿಗೆ ಹಾಗೂ ಇನ್‌ಸ್ಪೆಕ್ಟರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

ಕುಂಭತ್ತಿ ಗ್ರಾಮದ ಸರ್ವೆ ನಂಬರ್ 5ರಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಗಣಿಗಾರಿಕೆಗೆ ಸಮೀಪ ಜನ ವಸತಿ ಪ್ರದೇಶವಿದೆ. ಇದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಉಂಟಾಗಿದೆ. ಹಾಗೆಯೇ ಕಲ್ಲನ್ನು ಡೈನಮೈಟ್ ಬ್ಲಾಸ್ಟ್ ಮೂಲಕ ಒಡೆಯುತ್ತಿದ್ದಾರೆ. ಇದರಿಂದ ಅಲ್ಲಿನ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ. ಏಪ್ರಿಲ್‌ 4ರಂದು ಭಾರಿ ಪ್ರಮಾಣದಲ್ಲಿ ಬ್ಲಾಸ್ಟ್ ಮಾಡಿದ್ದರಿಂದ ಗ್ರಾಮದ ಸುಮಾರು 35ರಿಂದ 40 ಮನೆಗಳಿಗೆ ಹಾನಿಯಾಗಿದೆ. ಸ್ಫೋಟ ಮಾಡುವಾಗ ಭೂಮಿ ಕಂಪಿಸುತ್ತಿದೆ. ಹೊಸದಾಗಿ ಕಟ್ಟಿದ ಮನೆಗಳ ಪಿಲ್ಲರ್ ಸಹ ಡ್ಯಾಮೇಜ್ ಆಗಿದೆ. ಹೀಗೆ ಕಲ್ಲನ್ನು ಬ್ಲಾಸ್ಟ್ ಮಾಡುವಾಗ ಯಾವ ಸಂದರ್ಭದಲ್ಲಿಯಾದರೂ ಮನೆ, ಕೊಟ್ಟಿಗೆ ಧರೆಗೆ ಉರುಳುವ ಸಂಭವವಿದೆ ಹಾಗೂ ಪ್ರಾಣ ಹಾನಿಯಾಗುವ ಸಂಭವವಿದೆ. ಆದ್ದರಿಂದ ತಕ್ಷಣ ಕುಂಭತ್ತಿಯಲ್ಲಿ ನಡೆಯುತ್ತಿರುವ ಕಲ್ಲಗಣಿಗಾರಿಕೆಯನ್ನು ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವೆಂದು ಅಲ್ಲಿನ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಬ್ರಹಣ್ಯ, ಕೃರ್ಷಮೂರ್ತಿ, ಗುರುಮೂರ್ತಿ, ಗಣೇಶ್ ಐತಾಳ್, ಅಭಿಮನ್ಯು, ಶಾಂತಾ, ಆನಂದ, ಸತ್ಯನಾರಾಯಣ, ಶಾಮನಾಯ್ಕ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Mining menace : ಗಣಿಗಾರಿಕೆಯಿಂದ ದೇವರಿಗೂ ಸಂಕಷ್ಟ? ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನ ಸುತ್ತ ಭೂಅಗೆತ ವಿರೋಧಿಸಿ ಪಿಐಎಲ್
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಧರ್ಮಂತ ಗಂಗಾರಾಮ್ ಕೋರಿಯವರು, “ವಿಷಯ ತಿಳಿದ ತಕ್ಷಣ ಸ್ಥಳ ತನಿಖೆಗಾಗಿ ಆರ್.ಐ ಗ್ರಾಮ ಆಡಳಿತಾಧಿಕಾರಿ ದೀಪು ಹಾಗೂ ಗ್ರಾಮ ಸಹಾಯಕ ನಾಗಪ್ಪನವರನ್ನು ಕಳುಹಿಸಲಾಗಿದೆ. ಅವರ ವರದಿಯ ಅಧಾರದಲ್ಲಿ ಕಲ್ಲುಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೂ ನೀವು ನೀಡಿರುವ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಭೂವಿಜ್ಞಾನ ಇಲಾಖೆಯ ಗಮನಕ್ಕೆ ತರಲಾಗುವುದು” ಎಂದರು.

Exit mobile version