ಹೊಸನಗರ: ಪಟ್ಟಣದ ಪ್ರತಿಷ್ಠಿತ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Kodachadri Government First Class College) ಅವ್ಯವಸ್ಥೆಯ ಬಗ್ಗೆ ಸಾಗರ ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು (MLA Gopalakrishna Belur) ಫುಲ್ ಗರಂ ಆದ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ ದಿಢೀರ್ ಕಾಲೇಜಿಗೆ ಭೇಟಿ ನೀಡಿ,ಕಾಲೇಜು ಪರಿಸರವನ್ನು ವೀಕ್ಷಿಸಿದ ಶಾಸಕರು, ಸ್ವಚ್ಛತೆ ಹಾಗೂ ನಿರ್ವಹಣಾ ಕಾರ್ಯದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಗರಂ ಆದರು. ಈ ವೇಳೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳನ್ನು ಕರೆಸಿ ವಿದ್ಯಾಲಯವೆಂದರೆ ದೇವಾಲಯವಿದ್ದಂತೆ ನಿಮ್ಮ ಮನೆಗಳಿಗಿಂತ ಹೆಚ್ಚು ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿಳಿ ಹೇಳಿದರು.
ಇದನ್ನೂ ಓದಿ: Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?
ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಪಾಠ ಪ್ರವಚನದ ಜತೆಗೆ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು, ಕಾಟಾಚಾರಕ್ಕೆ ಕಾಲೇಜಿಗೆ ಬಂದು ಉಪನ್ಯಾಸ ನೀಡಿ ಹೋಗುವ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನನ್ನ ಕ್ಷೇತ್ರಕ್ಕೆ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ ಕೆ. ಉಮೇಶ್, ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಿಟಾಚಿ ಶ್ರೀಧರ್, ಡಾ. ಪ್ರವೀಣ್, ಕವಿತಾ ಪ್ರವೀಣ್, ಏರಿಗೆ ಉಮೇಶ್, ಮಹೇಂದ್ರ, ನಾಗೇಶ್, ಪ್ರವೀಣ, ಸದಾಶಿವ ಶೆಟ್ಟಿ, ಮಂಜುನಾಥ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.