Site icon Vistara News

Hosanagara News: ಪೂರ್ವಿಕರ ಬಳುವಳಿಯನ್ನು ಉಳಿಸಿ, ಬೆಳೆಸಿ: ಶಾಸಕ ಬೇಳೂರು ಗೋಪಾಲಕೃಷ್ಣ

MLA Belur Gopalakrishna spoke at Nammuru Hosanagara book introduction and Seminar programme at hosanagara

ಹೊಸನಗರ: ಜಾನಪದ ಕಲೆ, ಇತಿಹಾಸ, ಸಾಹಿತ್ಯ (Literature) ಸೇರಿದಂತೆ ನಮ್ಮ ಪೂರ್ವಿಕರ ಬಳುವಳಿಯನ್ನು ಉಳಿಸಿ, ಬೆಳೆಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು (Students) ಕಾರ್ಯೋನ್ಮುಖರಾಗಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯ ಜಾನಪದ ಪರಿಷತ್ತು ಹಾಗೂ ಸ್ಥಳೀಯ ಘಟಕಗಳು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ‘ನಮ್ಮೂರು ಹೊಸನಗರ’ ಪುಸ್ತಕ ಪರಿಚಯ ಹಾಗೂ ‘ಹೊಸನಗರ ಜಾನಪದ ಒಳನೋಟ’ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಲು ಸಹಕಾರಿ ಆಗುತ್ತವೆ ಎಂದರು.

ಹಿರಿಯ ಸಾಹಿತಿ ಡಾ.ಎಸ್.ಪಿ. ಪದ್ಮ ಪ್ರಸಾದ್ ಮಾತನಾಡಿ, ಯಾವುದೇ ವ್ಯಕ್ತಿಯ ಯಶಸ್ಸಿಗೆ ವಿವೇಕ, ಜ್ಞಾನ ಹಾಗೂ ಧೈರ್ಯವೇ ಮೂಲಮಂತ್ರವಾಗಿದೆ. ಇವುಗಳ ಅಳವಡಿಕೆಯಿಂದ ಮಾತ್ರವೇ ವ್ಯಕ್ತಿ ಯಶಸ್ಸಿನ ತುಟ್ಟತುದಿ ಏರಲು ಸಾಧ್ಯ ಎಂದರು.

ಇದನ್ನೂ ಓದಿ: Year Ender 2023: ಕಳೆದ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಶೇ.58ರಷ್ಟು ಹೆಚ್ಚು ಉದ್ಯೋಗ ಕಡಿತ!

ಇದೇ ಸಂದರ್ಭದಲ್ಲಿ ಪಂಚಾಯತ್‌ ರಾಜ್ ಪರಿಷತ್ತು ನೀಡುವ ಡಾ. ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಅವರನ್ನು ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎಂ. ಪರಮೇಶ್, ತಾಲೂಕ ಕಸಾಪ ಅಧ್ಯಕ್ಷ ತ.ಮ. ನರಸಿಂಹ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಾಲಗದ್ದೆ ಉಮೇಶ್, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮತ್, ತಾಲೂಕು ಕಸಾಪ ಪ್ರಧಾನ ಕಾಯದರ್ಶಿ ವಿಜೇಂದ್ರ ಶೇಟ್ ಭಾಗವಹಿಸಿದ್ದರು.

ನಂತರ. ನಡೆದ ವಿಚಾರ ಸಂಕಿರಣದಲ್ಲಿ ‘ಹೊಸನಗರ ಜಾನಪದ ಮಹತ್ವ’ ವಿಷಯ ಕುರಿತಂತೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ರತ್ನಾಕರ್ ಸಿ. ಕುನುಗೋಡು, ‘ಹೊಸನಗರ ಐತಿಹಾಸಿಕ ತಾಣಗಳು’ವಿಷಯ ಕುರಿತು ಶಿವಮೊಗ್ಗ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಜಿ. ವೆಂಕಟೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: CET Exam: ಏ. 20, 21ರಂದು ಸಿಇಟಿ ಪರೀಕ್ಷೆ; ಜ. 10ರಿಂದ ಅರ್ಜಿ ಸಲ್ಲಿಕೆ ಆರಂಭ

ಸಾಹಿತಿ ನಾಗರಕೊಡಿಗೆ ಗಣೇಶ್ ಮೂರ್ತಿ, ಕೊಡಚಾದ್ರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ. ಶ್ರೀಪತಿ ಹಳಗುಂದ ಉಪಸ್ಥಿತರಿದ್ದರು.

Exit mobile version