ಹೊಸನಗರ: ಪಟ್ಟಣದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಸುರೇಶ್ ಅವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾಯ್ದೆಯನ್ವಯ ತಂಬಾಕು (tobacco) ಉತ್ಪನ್ನ ಮಾರಾಟ ಮಾಡುತ್ತಿದ್ದ ಪಟ್ಟಣದ ಸುಮಾರು 25 ಅಂಗಡಿಗಳ ಮೇಲೆ ದಾಳಿ ನಡೆಸಿ ಅಂದಾಜು 3 ಸಾವಿರ ರೂ. ನಷ್ಟು ದಂಡ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಚ್.ಇ.ಒ. ಕರಿಬಸಮ್ಮ, ಪಟ್ಟಣದ ಎಲ್ಲ ಅಂಗಡಿಗಳ ಮಾಲೀಕರು ನಮ್ಮೊಂದಿಗೆ ಕೈಜೋಡಿಸಿ ತಂಬಾಕು ಮುಕ್ತ ಹೊಸನಗರ ಮಾಡಲು ಸಹಕರಿಸಿ ಎಂದು ತಿಳಿಸಿದರು.
ಇದನ್ನೂ ಓದಿ: Year Ender 2023: ಈ ವರ್ಷ ಹೆಚ್ಚು ಜನಪ್ರಿಯವಾದ ಸಿರಿಧಾನ್ಯಗಳಿವು
ದಾಳಿಯ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್ ಆಚಾರ್, ಕ್ಷಯರೋಗ ನಿಯಂತ್ರಣ ಮೇಲ್ವಿಚಾರಕ ಚಂದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಪೊಲೀಸ್ ಇಲಾಖೆಯ ವಸಂತ್ ಹಾಗೂ ಪಿಎಚ್‌ಸಿಒ ಗೀತಾ, ಬಿ.ಪಿ.ಎಂ ನಿಕೀತ್ ರಾಜ್, ಸಾಮಾಜಿಕ ಕಾರ್ಯಕರ್ತ ರವಿರಾಜ್ ಜಿ.ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.