Site icon Vistara News

Hosanagara News: ಇಸ್ಪೀಟ್‌ ಜೂಜಾಟದ ಅಡ್ಡೆ ಮೇಲೆ ದಾಳಿ: ನಗದು ಸಹಿತ 9 ಜನ ಆರೋಪಿಗಳ ಬಂಧನ

Police raid on gambling 9 accused arrested at hosanagara

ಹೊಸನಗರ: ಇಸ್ಪೀಟ್‌ ಜೂಜಾಟದ (Gambling) ಅಡ್ಡೆ ಮೇಲೆ ಹೊಸನಗರ ಠಾಣಾ ಪೊಲೀಸರು ದಾಳಿ (Police Attack) ನಡೆಸಿ, 9 ಜನ ಆರೋಪಿಗಳನ್ನು ಬಂಧಿಸಿ, ನಗದು ಹಣ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಪುರಪ್ಪೆಮನೆ ಬಳಿಯ ಹೆಬ್ಬೈಲು ಸೋಮೇಶ್ವರ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಖಚಿತ ಮಾಹಿತಿಯ ಮೇರೆಗೆ ಹೊಸನಗರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ.ಕೆ. ಹಾಗೂ ಸಿಬ್ಬಂದಿ ದಾಳಿ ನಡೆಸಿ, ಆನಂದಪುರ ಹಾಗೂ ಸಾಗರ ವಾಸಿಗಳಾದ ಸುರೇಶ, ಸುಪ್ರೀತ್ , ಭಾಸ್ಕರ, ರಫೀಕ್, ಕಾರ್ತಿಕ, ಪುರಪ್ಪೆಮನೆಯ ಉಪೇಂದ್ರ, ಉದಯ ಎಂಬ ಆರೋಪಿಗಳನ್ನು ಬಂಧಿಸಿ, 80,500 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Karnataka Weather : ನವೆಂಬರ್‌ ಮೊದಲ ವಾರ ಗುಡುಗು ಸಹಿತ ಭಾರಿ ಮಳೆ ಸೂಚನೆ!

ಜಿಲ್ಲಾ ಎಸ್‌ಪಿ ಮಿಥುನ್ ಕುಮಾರ್ ಜಿ ಕೆ, ಎಎಸ್‌ಪಿ ಅನಿಲ್ ಕುಮಾರ್, ಎನ್. ಬೂಮರೆಡ್ಡಿ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಗಜಾನನ ಎಂ ಸುತಾರ, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ.ಕೆ. ಅವರು ಸಿಬ್ಬಂದಿಗಳಾದ ಈರೇಶ್, ಗಂಗಪ್ಪ ಬಟ್ಟೋಲಿ, ಸುನೀಲ್, ತೀರ್ಥೇಶ್, ಶಶಿಧರ, ಸಂತೋಷ್ ನಾಯಕ್, ಗೋಪಾಲಕೃಷ್ಣ, ಅವಿನಾಶ್, ಮಹೇಶ, ಸಂದೀಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Exit mobile version