Site icon Vistara News

Hosanagara News: ಹೊಸನಗರದ ಗುರೂಜಿ ಶಾಲೆಯಲ್ಲಿ ಬೀಜದುಂಡೆ ತಯಾರಿಕಾ ಶಿಬಿರಕ್ಕೆ ಚಾಲನೆ

Seed Making Camp in hosanagara

ಹೊಸನಗರ: ಜಾಗತಿಕ ತಾಪಮಾನ ಏರಿಕೆ, ಅತಿವೃಷ್ಠಿ, ಅನಾವೃಷ್ಠಿಯಂತಹ ನೈಸರ್ಗಿಕ ವಿಕೋಪಗಳಿಗೆ ಪ್ರಕೃತಿ ನಾಶಕ್ಕೆ ಕಾರಣವಾಗಿವೆ ಎಂದು ಇಲ್ಲಿನ ಸೆಷನ್ಸ್ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಎಸ್. ಸಂತೋಷ್ (Hosanagara News) ಹೇಳಿದರು.

ಪಟ್ಟಣದ ಗುರೂಜಿ ರೆಸಿಡೆನ್ಶಿಯಲ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಬೀಜದುಂಡೆ ತಯಾರಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಲೆನಾಡು ಪ್ರದೇಶದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ವಾಡಿಕೆ ಮಳೆ ಸುರಿಯುತ್ತಿಲ್ಲ. ದಿನೇ ದಿನೇ ತಾಪಮಾನ ಏರುತ್ತಿರುವುದು ಎಚ್ಚರಿಕೆ ಘಂಟೆಯಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರ ಜಾಗೃತಿ ಹೊಂದಬೇಕು ಎಂದು ತಿಳಿಸಿದರು.

ಪ್ರಧಾನ ನ್ಯಾಯಾಧೀಶ ಕೆ. ರವಿಕುಮಾರ್ ಮಾತನಾಡಿ, ಮಕ್ಕಳು ಪ್ರತಿವರ್ಷವೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ಪಣ ತೊಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Money Guide: ಆನ್‌ಲೈನ್‌ ಸಾಲ ಎಂಬ ಚಕ್ರವ್ಯೂಹಕ್ಕೆ ಸಿಲುಕದಿರಲು ಹೀಗೆ ಮಾಡಿ…

ಪರಿಸರ ಕಾರ್ಯಕರ್ತ ಹನಿಯ ರವಿ ಮಾತನಾಡಿ, ಪ್ಲಾಸ್ಟಿಕ್, ಕಾಗದ, ವಿದ್ಯುತ್ ಅನ್ನು ಮಿತವಾಗಿ ಬಳಸುವುದರಿಂದಲೂ ಪರಿಸರ ಸಂರಕ್ಷಣೆ ಆಗುತ್ತದೆ. ನೈಸರ್ಗಿಕ ಕಾಡನ್ನು ನಾವೇ ನಾಶ ಮಾಡಿ, ಈಗ ಬೀಜದುಂಡೆಗಳನ್ನು ಬಿತ್ತುವ ಪರಿಸ್ಥಿತಿಗೆ ನಾವು ಬಂದಿರುವುದು ದುರಂತ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಉತ್ಸಾಹದಿಂದ ಬೀಜದುಂಡೆಗಳನ್ನು ತಯಾರಿಸಿದರು. ಪ್ರತಿವರ್ಷವೂ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಿದರು.

ಇದನ್ನೂ ಓದಿ: IPL 2024 : ಐಪಿಎಲ್​ನಿಂದ ಹೊರಗುಳಿದ ಆಟಗಾರರು, ಬದಲಿ ಆಟಗಾರರ ಪಟ್ಟಿ ಇಲ್ಲಿದೆ

ಈ ಸಂದರ್ಭದಲ್ಲಿ ಜಲತಜ್ಞ ಚಕ್ರವಾಕ ಸುಬ್ರಮಣ್ಯ ಹಾಗೂ ಪತ್ರಕರ್ತ ರವಿರಾಜ ಎಂ.ಜಿ.ಭಟ್, ಉಪವಲಯ ಅರಣ್ಯಾಧಿಕಾರಿ ಯುವರಾಜ್, ವನಪಾಲಕ ರಮೇಶ್, ಶಾಲಾ ಸಮಿತಿ ಉಪಾಧ್ಯಕ್ಷ ಸುದೇಶ್ ಕಾಮತ್, ನಿರ್ದೇಶಕ ನಾಗೇಶ್, ಕಾರ್ಯದರ್ಶಿ ಸಂಕೂರು ಶಾಂತಮೂರ್ತಿ, ಶಿಕ್ಷಕಿ ಉಷಾ, ಸುಷ್ಮಾ, ರೇಖಾ ಹರೀಶ್, ಲೋಕ ಅದಾಲತ್ ಗುರುರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version