ಹೊಸನಗರ: ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡ್ಲುಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ (Hosanagara News) ಲಭಿಸಿದೆ.
ಪರಿಸರ ಮಿತ್ರ, ಹೊಸನಗರ ತಾಲೂಕಿನ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿಗಳಿಗೆ ಪಾತ್ರವಾಗಿದ್ದ ಹಚ್ಚ ಹಸಿರಿನ ಅತ್ಯುತ್ತಮ ಉದ್ಯಾನವನ, ಪರಿಸರ ಕಲಿಕೆ, ಬಾಲವನವನ್ನು ಹೊಂದಿರುವ ಹುಂಚ ಗ್ರಾ.ಪಂ. ವ್ಯಾಪ್ತಿಯ ಸ.ಕಿ.ಪ್ರಾ. ಶಾಲೆ ಹಡ್ಲುಬೈಲು ಮತ್ತೊಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್ ಜೋಶಿ
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಇತ್ತೀಚೆಗೆ ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ನೀಡಿದ್ದು, ಇದು 40 ಮಾನದಂಡಗಳನ್ನು ಹೊಂದಿರುವ ಶಾಲೆಗಳಿಗೆ ನೀಡಲಾಯಿತು.
ಈ ಪ್ರಶಸ್ತಿಯನ್ನು ಸಂಸ್ಥಾಪಕ, ಸದ್ಗುರು ಮಧುಸೂದನ್ ಸಾಯಿ ಅವರು, ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಎಚ್.ವೈ. ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 10 ಸಾವಿರ ರೂ. ನಗದು, 8 ಸಾವಿರ ರೂ. ಬೆಲೆಯ ಗ್ರಂಥಾಲಯ ಪುಸ್ತಕಗಳು, ದಿನಚರಿಗಳು, ಎಲ್ಲಾ ಮಕ್ಕಳಿಗೂ ಚಾಕೊಲೇಟ್ ಹಾಗೂ ಮುಖ್ಯ ಶಿಕ್ಷಕರಿಗೆ ಕೈಗಡಿಯಾರವನ್ನೊಳಗೊಂಡಿದೆ.
ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್; ಶೀಘ್ರದಲ್ಲೇ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ
ಈ ಕುರಿತು ಮುಖ್ಯ ಶಿಕ್ಷಕ ಚಂದ್ರಶೇಖರ ಮಾತನಾಡಿ, ಮಲೆನಾಡಿನ ಹೊಸನಗರ ತಾಲೂಕಿನ ಕಾಡಂಚಿನ ಕುಗ್ರಾಮದಲ್ಲಿರುವ ಹಡ್ಲುಬೈಲು ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿರುವುದು ನಮಗೆ ಸಂಭ್ರಮ ತಂದಿದೆ ಎಂದು ತಿಳಿಸಿದ್ದಾರೆ.