Site icon Vistara News

Karanataka Election: ಕರ್ನಾಟಕವನ್ನು ದೆಹಲಿಯಂತೆ ಮಾಡುತ್ತೇವೆ: ರಾಜ್ಯಸಭಾ ಸದಸ್ಯ ಶಹನಾಜ್‌ ಹಿಂದೂಸ್ತಾನಿ

ಎಎಪಿ ಸುದ್ದಿಗೋಷ್ಟಿ

ರಿಪ್ಪನ್‌ಪೇಟೆ: “ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯೊಂದಿಗೆ ಕುಡಿಯುವ ನೀರು, ಉಚಿತ ವಿದ್ಯುತ್, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹೀಗೆ ಹಲವು ಜನಹಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸರ್ಕಾರದ ಆಡಳಿತ ಕ್ರಮವನ್ನು ಅಮೆರಿಕ ದೇಶ ಪ್ರಶಂಸಿಸಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ (Karanataka Election) ಆಪ್‌ ಗೆಲ್ಲಲಿದೆ” ಎಂದು ದೆಹಲಿ ರಾಜ್ಯಸಭಾ ಸದಸ್ಯ, ಎಎಪಿ ಸಂಸ್ಥಾಪಕ ಸದಸ್ಯ ಶಹನಾಜ್ ಹಿಂದೂಸ್ತಾನಿ ಹೇಳಿದರು.

ಪಟ್ಟಣದ ಸಾಗರ ರಸ್ತೆಯಲ್ಲಿರುವ ಎಎಪಿ ಕಛೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಾರತ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಇನ್ನೂ ಹೆಚ್ಚಾಗಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಹೇಳುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಎಎಪಿ ಪಕ್ಷಕ್ಕೆ ಒಂದು ಅವಕಾಶ ಮಾಡಿಕೊಡಿ. ದೆಹಲಿಯಂತೆ ಕರ್ನಾಟಕದಲ್ಲಿ ಮಾಡಿ ಮತದಾರರ ಮನ ಗೆಲ್ಲುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ನಂಜನಗೂಡಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್‌ಗೆ ಜನ ಬೆಂಬಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು

“ದೆಹಲಿಯಲ್ಲಿ ನಮ್ಮ ಕೇಜ್ರಿವಾಲ್ ಸರ್ಕಾರ ಶಿಕ್ಷಣ, ವಿದ್ಯುತ್ ಮತ್ತು ಕುಡಿಯುವ ನೀರು ಸೇರಿದಂತೆ ಹಲವು ಜನಹಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಉಚಿತವಾಗಿ ನೀಡುತ್ತಿದೆ. ಇದರಿಂದಾಗಿ ಅಮೆರಿಕ ದೇಶವೇ ಬೆರಗಾಗುವಂತೆ ಮಾಡಿದೆ. ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರು ಕ್ಷೇತ್ರದ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದ ಮತದಾರರಲ್ಲಿ ದೆಹಲಿಯ ಕೇಜ್ರಿವಾಲ್ ಜಾರಿಗೊಳಿಸಿರುವ ಹಲವು ಜನಹಿತ ಕಾರ್ಯಗಳನ್ನು ಮನವರಿಕೆ ಮಾಡಿದ್ದಾರೆ” ಎಂದು ಹೇಳಿದರು.

ಎಎಪಿ ಪಕ್ಷದ ಮುಖಂಡರಿಂದ ಪ್ರಚಾರ.

“ಈ ಬಾರಿ ಕರ್ನಾಟಕದಲ್ಲಿ ಎಎಪಿ ಪಕ್ಷಕ್ಕೊಂದು ಅವಕಾಶ ಮಾಡಿಕೊಡುವಂತೆ ಮತದಾರ ಪ್ರಭುಗಳು ಮನಸ್ಸು ಮಾಡಿ ಸಾಗರ-ಹೊಸನಗರ ಕ್ಷೇತ್ರದ ಎಎಪಿ ಅಭ್ಯರ್ಥಿ ಕೆ. ದಿವಾಕರ್ ಬೆಂಬಲಿಸಿ” ಎಂದು ಮನವಿ ಮಾಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಎಪಿ ಕಾರ್ಯಕರ್ತರು ಮತಯಾಚನೆ ನಡೆಸಿದರು.

ಇದನ್ನೂ ಓದಿ: Karnataka Election 2023: ನನ್ನ ಗುರಿ ಬಿಜೆಪಿಯನ್ನು ಗೆಲ್ಲಿಸುವುದೇ ಹೊರತು, ಮುಖ್ಯಮಂತ್ರಿ ಹುದ್ದೆ ಅಲ್ಲ: ಬಿ.ವೈ. ವಿಜಯೇಂದ್ರ

ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡರಾದ ರಾಜು ಚನ್ನಕೊಪ್ಪ, ಹಸನಬ್ಬ, ಕುಕ್ಕಳಲೇ ಈಶ್ವರಪ್ಪ, ಹನೀಪ್, ಇನ್ನಿತರ ಮುಖಂಡರು ಹಾಜರಿದ್ದರು.

Exit mobile version