Site icon Vistara News

Karnataka Election : ಹೆಣ್ಣು ಗಂಡಿಗೆ ಸಮಾನವಾದ ಹಕ್ಕು ಕೊಟ್ಟ ರಾಷ್ಟ್ರ ನಮ್ಮದು; ವೀರನಗೌಡ ಹುಡೇದ

#image_title

ರಿಪ್ಪನ್ ಪೇಟೆ : “ಭಾರತದಲ್ಲಿ ಮಾತ್ರ ಸ್ವಾತಂತ್ರ್ಯ ಬಂದ ಪ್ರಥಮದಲ್ಲಿ ಸ್ತ್ರೀ-ಪುರುಷ ಎಂದು ಭೇದ ಭಾವ ಮಾಡದೆ ಸಮಾನ ಮತದಾನದ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಯಿತು. ಈ ಕಾರ್ಯದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಮಹತ್ತರವಾದುದು” ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವೀರನಗೌಡ ಹುಡೇದ (Karnataka Election) ಹೇಳಿದರು.

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ರಿಪ್ಪನ್‌ಪೇಟೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಸಮಿತಿಯ ಆಶ್ರಯದಲ್ಲಿ ಮತದಾನದ ಮಹತ್ವ ಕುರಿತು ನಡೆದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವೀರನಗೌಡ ಅವರು ಈ ಮಾತುಗಳನ್ನಾಡಿದರು. “ವಿಶ್ವದ ಕೆಲವು ದೇಶಗಳು ನೂರಾರು ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಸಹ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಆ ರಾಷ್ಟ್ರಗಳಲ್ಲಿ ಅನೇಕ ವರ್ಷಗಳ ನಂತರ ಸಮಾನ ಮತದಾನ ಹಕ್ಕು ಪಡೆಯುವಂತಾಯಿತು. ಆದರೆ ಭಾರತದಲ್ಲಿ ಸ್ವಾತಂತ್ರ್ಯ ಬಂದ ತಕ್ಷಣವೇ ಈ ಹಕ್ಕು ಸಿಕ್ಕಿತು” ಎಂದರು.

ಇದನ್ನೂ ಓದಿ: Karnataka Election : ರಂಗೋಲಿ ಬಿಡಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದ ವನಿತೆಯರು
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್.ಮಂಜುನಾಥ ಕಾಮತ್ ಗಿಡಕ್ಕೆ ನೀರೆರೆಯುವ ಮುಖಾಂತರ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ.ನರಸಿಂಹ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಯುವ ಜನತೆ ಮತದಾನದ ಬಗ್ಗೆ ಜಾಗೃತಿ ಹೊಂದಬೇಕಾದ ಅವಶ್ಯಕತೆ ಬಗ್ಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜಿ. ಚಂದ್ರಶೇಖರ್ ಮಾತನಾಡಿದರು. ಹೋಬಳಿ ಕ.ಸಾ.ಪ. ಸಮಿತಿ ಅಧ್ಯಕ್ಷರಾದ ಆರ್ ನಾಗಭೂಷಣ ಮತ ನೋಂದಾವಣೆ ಬಗ್ಗೆ ಮಾತನಾಡಿದರು. ಕವಿಗಳಾದ ಗಣೇಶ್ ಮೂರ್ತಿ ನಾಗರ ಕೊಡುಗೆ ಹಾಸ್ಯ ಚಟಾಕಿಯೊಂದಿಗೆ ಮಾತನಾಡಿ ಕವನವಾಚಿಸಿದರು. ಜಾನಪದ ಕಲಾವಿದ ಆಂಜನೇಯ ಜೋಗಿ ಅವರು ಮತದಾನ ಜಾಗೃತಿ ಬಗ್ಗೆ ಲಾವಣಿ ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಟಿ.ಚಂದ್ರಶೇಖರ್ ವಹಿಸಿದ್ದರು. ಸಭೆಯಲ್ಲಿ ಸಾಹಿತಿ ಹ.ಆ. ಪಾಟೀಲ ಉಪಸ್ಥಿತರಿದ್ದರು. ಕುಮಾರಿ ರಮ್ಯಾ ಪ್ರಾರ್ಥನೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಕುನುಗೋಡು ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Exit mobile version