Site icon Vistara News

Karnataka Election : ಆರಗ ಜ್ಞಾನೇಂದ್ರ ಹೇಳಿಕೊಳ್ಳುತ್ತಿರುವುದೆಲ್ಲ ನಾನು ಮಾಡಿದ ಸಾಧನೆಗಳು ಎಂದ ಕಿಮ್ಮನೆ ರತ್ನಾಕರ್‌

#image_title

ತೀರ್ಥಹಳ್ಳಿ: “ಬಿಜೆಪಿ ಅಭಿವೃದ್ಧಿ ಹೆಸರಲ್ಲಿ ಮಾಡಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಇದು ಈಗ ಸಾರ್ವಜನಿಕರಿಗೆ ಗೊತ್ತಾಗಿದೆ. ನಾನು ಕಾಂಗ್ರೆಸ್ ಸರ್ಕಾರದ ಮಂತ್ರಿಯಾಗಿದ್ದಾಗ ಮಂಜೂರು ಮಾಡಿಸಿ ಕೊಂಡು ಬಂದ ಮಹಿಷಿ, ಚಂಗಾರು, ಮುಂತಾದ ಸೇತುವೆಗಳನ್ನು ಈಗ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ (Karnataka Election) ಹೇಳಿದ್ದಾರೆ.


ಪಟ್ಟಣದ ಆರ್.ಎಂ.ಮಂಜುನಾಥ್ ಗೌಡರ ನಿವಾಸದಲ್ಲಿ ನಡೆದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಜ್ಞಾನೇಂದ್ರ ಅವರ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಿಂದ ಅವರ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಿರಾಸೆಗೊಂಡಿದ್ದಾರೆ. ಖಂಡಿತವಾಗಿಯೂ ಈ ಬಾರಿ ಅವರು ಜ್ಞಾನೇಂದ್ರರಿಗೆ ಮತ ನೀಡುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಟಿಕೆಟ್‌ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿದ ಕಿಮ್ಮನೆ, ಮಂಜುನಾಥ್ ಗೌಡ
ರಾಜ್ಯ ಕೆ.ಪಿ.ಸಿ.ಸಿ ಸಂಚಾಲಕ ಸಹಕಾರಿ ಆರ್.ಎಂ.ಮಂಜುನಾಥ್ ಗೌಡ ಮಾತನಾಡಿ, “ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುವುದು ನಿಶ್ಚಿತ. ತೀರ್ಥಹಳ್ಳಿಯಲ್ಲಿ ಕೂಡ ಕಾಂಗ್ರೆಸ್ ಗೆಲ್ಲಲಿದೆ. ಎಲ್ಲ ಕಾಂಗ್ರೆಸ್ ಕಾರ್ಯ ಕರ್ತರು ಒಗ್ಗೂಡಿ ಕೆಲಸ ಮಾಡುವ ಮೂಲಕ ಬಿಜೆಪಿಯನ್ನು ಸೋಲಿಸಬೇಕಿದೆ” ಎಂದರು.


ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಕಡ್ತುರ್ ದಿನೇಶ್, ಸುಶೀಲ ಶೆಟ್ಟಿ, ಹಾರೋಗೋಳಿಗೆ ಪದ್ಮನಾಭ, ಕಟ್ಟೆಹಕ್ಳು ಕಿರಣ್, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ರಾಘವೇಂದ್ರ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.

Exit mobile version