Site icon Vistara News

Karnataka Election: ಬೇಳೂರು ಗೋಪಾಲಕೃಷ್ಣರನ್ನು ಗೆಲ್ಲಿಸುವುದೇ ಕೊನೆಯ ಆಸೆ; ಹಾಸಿಗೆ ಹಿಡಿದ ಅಂಗವಿಕಲನ ಕೋರಿಕೆ

Handicap man talks to press in Sagara

#image_title

ಸಾಗರ: ವಿಧಾನಸಭಾ ಚುನಾವಣೆಯ (Karnataka Election) ಕಣ ರಂಗೇರಲಾರಂಭಿಸಿದೆ. ಈ ಸಂದರ್ಭದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಹುಟ್ಟು ಅಂಗವಿಕಲನಾಗಿರುವ ವ್ಯಕ್ತಿಯೊಬ್ಬರು ಹಾಸಿಗೆ ಹಿಡಿದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ಗೆಲುವನ್ನು ನೋಡುವುದೇ ತಮ್ಮ ಕೊನೆಯ ಆಸೆ ಎಂದು ಹೇಳಿದ್ದಾರೆ.

ಹೌದು. ಹೊಸನಗರ ತಾಲೂಕಿನ ಬಾಣಿಗ ಗ್ರಾಮದ ಪೂಜಾರಿ ಜಡ್ಡು ನಿವಾಸಿ ಉಮಾಪತಿ ಅವರು ಹುಟ್ಟು ಅಂಗವಿಕಲರಾಗಿದ್ದು, ಕಳೆದ ಕೆಲ ವರ್ಷಗಳಿಂದ ಟಿಬಿ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ಅವರು ಇತ್ತೀಚೆಗೆ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರು ತಮ್ಮ ಕುಟುಂಬದವರೊಂದಿಗೆ ಬೇಳೂರು ಗೋಪಾಲಕೃಷ್ಣರ ಗೆಲುವನ್ನು ನೋಡುವುದು ಮತ್ತು ಅವರನ್ನು ಕಣ್ಣಾರೆ ಕಂಡು ಮಾತನಾಡಿಸುವುದು ಕೊನೆಯ ಆಸೆ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿದ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದವರು ಸೋಮವಾರ ಉಮಾಪತಿ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Karnataka Election 2023: ಡಬಲ್‌ ಎಂಜಿನ್‌ ಎಂದರೆ 80 ಪರ್ಸೆಂಟ್‌ ಕಮಿಷನ್ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

ಕಾಯಿಲೆಯಿಂದ ನಿತ್ರಾಣಗೊಂಡಿದ್ದ ಉಮಾಪತಿ ಅವರಿಗೆ ಗೋಪಾಲಕೃಷ್ಣ ಅಭಿಮಾನಿ ಬಳಗವು ಮಾರುತಿಪುರ ಸರ್ಕಾರ ಆಸ್ಪತ್ರೆಯಿಂದ ಸಿಬ್ಬಂದಿಯನ್ನು ಕರೆಸಿಕೊಂಡು ತಪಾಸಣೆ ಮಾಡಿಸಿದೆ. ಅವರ ಬಿಪಿ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ಸಿಬ್ಬಂದಿ ಸೂಚಿಸಿದ್ದು, ಅದರಂತೆ ಅವರನ್ನು ಆಂಬ್ಯುಲೆನ್ಸ್‌ ಮೂಲಕ ಕರೆದುಕೊಂಡು ಬಂದು ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಭಿಮಾನಿ ಬಳಗದ ಮಂಜು ಸಣ್ಣಕ್ಕಿ, ಮಂಜುನಾಥ್ ಬ್ಯಾಣದ, ಬಸವರಾಜ್ ಗಗ್ಗ, ರೋಹಿತ್ ಚಿಕ್ಕಮಣತಿ, ವಿಜಿತ್ ಗೌಡ, ಗೋಪಿನಾಥ್ ಜಯನಗರ, ರಾಜು ಎರಗಿ, ಸತೀಶ್ ಮೊದಲಾದವರು ಉಮಾಪತಿಯ ನೆರವಿಗೆ ಧಾವಿಸಿದರು.

ಈ ವಿಚಾರ ತಿಳಿಯುತ್ತಿದ್ದಂತೆಯೇ ಚುನಾವಣೆಯ ಪ್ರಚಾರ ಸಭೆಯಲ್ಲಿದ್ದ ಬೇಳೂರು ಗೋಪಾಲ ಕೃಷ್ಣ ಅವರು, ದೂರವಾಣಿ ಕರೆ ಮೂಲಕ ಮಾತನಾಡಿ ಉಮಾಪತಿಯವರನ್ನು ಸಮಾಧಾನಿಸಿದರು. ಬೇಗ ಗುಣಮುಖರಾಗುವಂತೆ ಹಾರೈಸಿ, ಇನ್ನೆರಡು ದಿನದಲ್ಲಿ ಭೇಟಿ ಮಾಡುವ ಭರವಸೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: Urban cooperative banks : ನಗರ ಸಹಕಾರಿ ಬ್ಯಾಂಕ್‌ಗಳ ಸುಧಾರಣೆಗೆ ಆರ್‌ಬಿಐ ಹೊಸ ನಿಯಮ ಜಾರಿ, ಪರಿಣಾಮವೇನು?

ಉಮಾಪತಿ ಸೇರಿದಂತೆ ಕುಟುಂಬದ ಮೂರು ಮಂದಿ ಸಹೋದರರು ಕೂಡ ಹುಟ್ಟು ಅಂಗವಿಕಲರಾಗಿದ್ದಾರೆ. ಪ್ರತ್ಯೇಕವಾಗಿ ವಾಸಿಸುತ್ತಿರುವ ಸಹೋದರರೆಲ್ಲರೂ ತೀವ್ರ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಹುಟ್ಟು ಕುರುಡನಾಗಿ ಹಾಗೂ ದೈಹಿಕ ಅಸಮರ್ಥತೆಯಿಂದ, ಇದೀಗ ತೀವ್ರ ತರದ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಉಮಾಪತಿ, ಪತ್ನಿ ಹಾಗೂ ಎರಡು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಹೊತ್ತಿನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ತಲುಪಿರುವ ಕುಟುಂಬಕ್ಕೆ ದಾನಿಗಳ, ಮಾನವೀಯ ಕೈಗಳ ಸಹಕಾರ ಕೂಡ ಬೇಕಿದೆ.

Exit mobile version