Site icon Vistara News

Karnataka Election: ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪಗೆ ಬೆಂಬಲ; ರಿಪ್ಪನ್‌ಪೇಟೆ ವೀರಶೈವ ಸಮಾಜ ನಿರ್ಧಾರ

#image_title

ರಿಪ್ಪನ್‌ಪೇಟೆ: ವಿಧಾನಸಭಾ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಎಲ್ಲೆಡೆ ಭರ್ಜರಿ ಪ್ರಚಾರಗಳೂ ನಡೆಯುತ್ತಿವೆ. ಹಾಗೆಯೇ ಹಲವು ಸಮಾಜಗಳು ತಮ್ಮ ಬೆಂಬಲ ಯಾವ ಅಭ್ಯರ್ಥಿಗೆ ಎನ್ನುವ ಬಗ್ಗೆಯೂ ಘೋಷಣೆ ಮಾಡಿಕೊಂಡಿವೆ. ಅದೇ ರೀತಿಯಲ್ಲಿ ಇದೀಗ ಶಿವಮೊಗ್ಗದ ರಿಪ್ಪನ್‌ಪೇಟೆಯ ವೀರಶೈವ ಸಮಾಜವು ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ಘೋಷಿಸಿದೆ.

ಈ ವಿಚಾರವಾಗಿ ರಿಪ್ಪನ್‌ಪೇಟೆಯ ಶಿವಮಂದಿರದಲ್ಲಿ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ. ದುಂಡರಾಜ್‌ಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ರಾಜ್ಯದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ರಿಪ್ಪನ್‌ಪೇಟೆಯ ಶಿವಮಂದಿರಕ್ಕೆ 3 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಕೊಡಲಾಗಿದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪನವರು ಶ್ರಮಿಸಿದ್ದಾರೆ. ಆ ಕಾರಣದಿಂದಾಗಿ ಈ ಬಾರಿ ಚುನಾವಣೆಯಲ್ಲಿ ಸಮಾಜದವರು ಶಾಸಕ ಹರತಾಳು ಹಾಲಪ್ಪ ಅವರನ್ನು ಬೆಂಬಲಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳಲ್ಲೆರೂ ಭ್ರಷ್ಟಾಚಾರಿಗಳು ಎಂದು ಹೇಳಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ದುಂಡುರಾಜ್‌ಗೌಡ ಅವರು, ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Karnataka Election 2023: ನಾನು 1 ವರ್ಷದಲ್ಲಿ ಮಾಡಿದ್ದನ್ನು ಮೋದಿಗೆ 10 ವರ್ಷದಲ್ಲಿ ಮಾಡಲಾಗಿಲ್ಲ: ಎಚ್.ಡಿ. ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಆರ್. ಶಾಂತವೀರಪ್ಪ ಗೌಡ ಮಸರೂರು, ಕಾರ್ಯದರ್ಶಿ ಡಿ.ಎಸ್. ರಾಜಾಶಂಕರ್, ಬಿ.ವಿ. ನಾಗಭೂಷಣ, ಕಮದೂರು ಪರಮೇಶ್, ಕೆ.ಎಂ. ಈಶ್ವರಪ್ಪ, ಎಚ್.ಎಂ. ವರ್ತೇಶಗೌಡರು, ಬೆನವಳ್ಳಿ ನಿಂಗಪ್ಪಗೌಡ, ಮಹೇಂದ್ರ ಗೌಡ ಬೆನವಳ್ಳಿ, ಬಿ.ಎಚ್. ಸ್ವಾಮಿಗೌಡ ಬೆಳಂದೂರು ಹಾಗೂ ಜೆ.ಎಂ. ಶಾಂತಪ್ಪ ಜಂಬಳ್ಳಿ ಹಾಜರಿದ್ದರು.

Exit mobile version