ರಿಪ್ಪನ್‌ಪೇಟೆ: ಶನಿವಾರ ಬೆಳ್ಳಂಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ (Rain News) ಪಟ್ಟಣದ ಶಬರೀಶ ನಗರದ ಪುಟ್ಟಮ್ಮ ಎಂಬುವರ ಮನೆಯ ಚಾವಣಿ ಕುಸಿದು ಬಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಘಟನೆ ಜರುಗಿದೆ.
ಇದನ್ನೂ ಓದಿ: Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು
ಶನಿವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಪುಟ್ಟಮ್ಮ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ತುರ್ತು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇನ್ನು ಕಳೆದ ಎರಡು ಮೂರು ದಿನಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ ಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ, ಆಲ್ಲಲ್ಲಿ ಮರಗಳ ರಂಬೆ-ಕೊಂಬೆಗಳು ಉರುಳಿ ಬೀಳುತ್ತಿದ್ದು ಇಲ್ಲಿನ ಸಾಗರ ರಸ್ತೆಯ ಅಂದಾಸುರ ಬಳಿ ಅಕೇಶಿಯ ಮರವೊಂದು 11 ಕೆ.ವಿ. ಲೈನ್ ಮೇಲೆ ಬಿದ್ದಿದ್ದು, ಜನರು ಭಯದಲ್ಲೇ ಓಡಾಡುವಂತಾಗಿದೆ.
ಇದನ್ನೂ ಓದಿ: Tiger Attack : ಮರಿಯಾನೆ ಕೊಂದ ಹುಲಿ; ಶವ ಬಿಟ್ಟು ಕದಲದ ತಾಯಿ ಆನೆ ರೋಧನೆ
ಈ ಕುರಿತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತರಲಾದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.