Site icon Vistara News

ಒಂದೇ ಬಾರಿಗೆ ಎರಡು ವರ್ಷಗಳ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಕುವೆಂಪು ವಿಶ್ವವಿದ್ಯಾಲಯ

ಶಿವಮೊಗ್ಗ: ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಕುಂಠಿತವಾಗಿದ್ದು ಸುಳ್ಳಲ್ಲ. ಅದೆಷ್ಟೊ ಘಟಿಕೋತ್ಸವ ಸಮಾರಂಭಗಳು ಬೆರಳಣಿಕಯಷ್ಟೇ ವಿದ್ಯಾರ್ಥಿಗಳೊಂದಿಗೆ ಮುಗಿದು ಹೋಗಿದ್ದವು. ಇದೀಗ ಕೋವಿಡ್‌ ತೀವ್ರತೆ ಕಡಿಮೆಯಾದ ಬೆನ್ನಲ್ಲೇ ವಿಶ್ವವಿದ್ಯಾಲಯಗಳು ಸರದಿಯಲ್ಲಿ ಘಟಿಕೋತ್ಸವ ನಡೆಸಲು ಸಿದ್ದತೆ ನಡೆಸಿಕೊಂಡಿದೆ. ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿವಿ, ರಾಜೀವ್‌ ಗಾಂಧಿ ಆರೋಗ್ಯ ವಿವಿ ಘಟಿಕೋತ್ಸವ ನಡೆಸಿವೆ. ಇದೀಗ ಕುವೆಂಪು ವಿಶ್ವವಿದ್ಯಾಲಯ ಎರಡು ವರ್ಷದ ಘಟಿಕೋತ್ಸವ ನಡೆಸುತ್ತಿದೆ.

ಇದನ್ನೂ ಓದಿ |ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ

ಈ ಸಂಬಂಧ ಮಂಗಳವಾರ ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತಾನಾಡಿದ ಅವರು, ಜೂನ್‌ 16ರಂದು ವಿಶ್ವವಿದ್ಯಾಲಯದ 31 ಮತ್ತು 32ನೇ ವರ್ಷದ ವಾರ್ಷಿಕ ಘಟಿಕೋತ್ಸವ ನಡೆಸಲಾಗುತ್ತಿದೆ. ಇದಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ. ಶ್ರೀದೇವಿ ಎ ಸಿಂಗ್ ಭಾಗಿಯಾಗಲಿದ್ದಾರೆ.

31 ಮತ್ತು 32ನೇ ಘಟಿಕೋತ್ಸವದಲ್ಲಿ ತಲಾ 3 ರಂತೆ 6 ಗಣ್ಯರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುತ್ತಿದೆ. 31ನೇ ಘಟಿಕೋತ್ಸವದಲ್ಲಿ ಡಿ.ಎಚ್. ಶಂಕರಮೂರ್ತಿ, ಗೀತಾ ನಾರಾಯಣನ್, ಭ.ಮ. ಶ್ರೀಕಂಠ ಹಾಗೂ 32ನೇ ಘಟಿಕೋತ್ಸವದಲ್ಲಿ ಪ್ರೊ.ಟಿ.ವಿ. ಕಟ್ಟಿಮನಿ, ಮಹಾಂತೇಶ್ ಜಿ. ಕಿವಡಸಣ್ಣವರ್, ಬಾ.ಸು. ಅರವಿಂದ ಅವವರಿಗೆ ನೀಡಲಾಗುತ್ತಿದೆ. 32ನೇ ಘಟಿಕೋತ್ಸವದಲ್ಲಿ 129 ಅಭ್ಯರ್ಥಿಗಳು ಪಿಎಚ್‌ಡಿ ಪದವಿಗೆ ಅರ್ಹರಾಗಿದ್ದು, ಒಟ್ಟು 20,638 ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುತ್ತಿದ್ದಾರೆ.

232 ಸ್ವರ್ಣ ಪದಕ 66 ವಿದ್ಯಾರ್ಥಿಗಳಿಗೆ ಹಾಗೂ 15 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರದಾನ ಮಾಡಲಾಗುತ್ತಿದೆ. ಕನ್ನಡ ಅಧ್ಯಯನ ವಿಭಾಗದ ದಿವ್ಯಾ ಎಚ್.ಎನ್ 11 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಪಡೆದು ಅತಿ ಹೆಚ್ಚು ಪದಕ ಪಡೆದ ಸಾಲಿನಲ್ಲಿ ಇದ್ದಾರೆ ಎಂದು ವೀರಭದ್ರಪ್ಪ ಮಾಹಿತಿ ನೀಡಿದರು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾದ ಯುವಕ

Exit mobile version