ಸೊರಬ: ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ರಥ ಬೀದಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ (Shri Ayyappa Swamy Temple) ನಲವತ್ತೆಂಟು ದಿನಗಳ ಕಾಲ ವ್ರತವನ್ನು ಕೈಗೊಂಡ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಮಹಾ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ, ಪುಣ್ಯಪ್ರದವಾದ ಹದಿನೆಂಟು ಮೆಟ್ಟಿಲುಗಳಿಗೆ ಶ್ರೇಷ್ಠ ಪಡಿ ಪೂಜೆ ನಡೆಸಲಾಯಿತು. ವಿಶೇಷವಾಗಿ ಸ್ವಾಮಿಯ ಮೂರ್ತಿಗೆ ಅಭಿಷೇಕ, ಭಸ್ಮ, ಹಾಲು, ಜೇನು, ಪಂಚಾಮೃತ, ಸೀಯಾಳ ನೀರು, ಶ್ರೀಗಂಧ, ಚಂದನ, ಪನ್ನೀರು, ಸೇರಿದಂತೆ ವಿವಿಧ ಪದಾರ್ಥಗಳಿಂದ ಅಭಿಷೇಕ ನೆರವೇರಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಇದನ್ನೂ ಓದಿ: Ship Hijacked: ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್; ನೌಕಾಪಡೆ ಕಟ್ಟೆಚ್ಚರ
ಭಕ್ತರು ಮಾಲಾಧಾರಿಗಳಿಂದ ತುಪ್ಪದ ಕಾಯಿಗಳನ್ನು ತುಂಬಿಸಿದರು, ನಂತರ ಸನ್ನಿಧಿಯಲ್ಲಿ ಇರುಮುಡಿಕಟ್ಟಿ ಪೂಜೆ ಸಲ್ಲಿಸಿ. ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆಗಳನ್ನು ಹಾಡುತ್ತಾ ಸನ್ನಿಧಿಯಿಂದ ರಥಬೀದಿ ಮಾರ್ಗವಾಗಿ ಸಿದ್ದಾಪುರ ರಸ್ತೆ ಬಳಿ ಇರುವ ರೇಣುಕಾಂಬ ದೇವರ ಕಟ್ಟೆಯವರೆಗೆ ಮೆರವಣಿಗೆ ನಡೆಸಿ, ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯದರ್ಶನಕ್ಕೆ ಮಾಲಾಧಾರಿಗಳ ಯಾತ್ರೆ ತೆರಳಿತು.
ಇದನ್ನೂ ಓದಿ: Aase Kannada Serial: ನಟ ರಮೇಶ್ ಅರವಿಂದ್ ಮನಗೆದ್ದ ‘ಆಸೆ’ ಧಾರಾವಾಹಿ!
ಶಬರಿಮಲೆ ಯಾತ್ರೆಗೆ ತೆರಳುವ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಗೆ ನೆರೆದಂತಹ ನೂರಾರು ಭಕ್ತಾದಿಗಳು ನಮಿಸಿದರು.