ಸೊರಬ: ತಾಲೂಕಿನ ಕಮರೂರು ಗ್ರಾಮದ ಶ್ರೀ ಸತ್ಯಸಾಯಿ ಸರ್ವನಿಕೇತನಮ್ ಆವರಣದಲ್ಲಿ ಸೋಮವಾರ ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಮ್‌ನ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರದ ಭೂಮಿಪೂಜೆಯನ್ನು (Bhumi Puja) ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಕೇಂದ್ರ ಈ ಭಾಗದಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ. ಕಟ್ಟಡವನ್ನು ಯಾರು ಬೇಕಾದರೂ ಕಟ್ಟಬಹುದು, ಆದರೆ ಆ ಕಟ್ಟಡದ ನೆರಳಿನಲ್ಲಿರುವ ಮಕ್ಕಳ ವ್ಯಕ್ತಿತ್ವ ಕಟ್ಟುವುದು ಕಷ್ಷದ ಕೆಲಸ. ಶ್ರೀ ಮಧುಸೂಧನ ಗುರುಗಳ ಆಶೀರ್ವಾದದಲ್ಲಿ ಆ ಕೆಲಸ ಅಭೂತಪೂರ್ವವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Job Alert: ಬರೋಬ್ಬರಿ 75,768 ಕಾನ್‌ಸ್ಟೇಬಲ್ ಹುದ್ದೆಗಳಿಗೆ ನ.24ರಿಂದ ಅರ್ಜಿ ಸಲ್ಲಿಸಿ!
ಶ್ರೀ ಸತ್ಯಾಸಾಯಿ ಲೋಕಸೇವಾ ಗುರುಕುಲಮ್‌ನ ಪ್ರಧಾನ ಪಾಲಕ ಶಿವಪ್ರಸಾದ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಸತ್ಯಾಸಾಯಿ ಲೋಕಸೇವಾ ಗುರುಕುಲಮ್ ಸಂಸ್ಥೆಯ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರದಿಂದ ಬಡ ಜನರಿಗೆ ಅನುಕೂಲವಾಗಲಿದೆ. ಮುಂದಿನ ಮಾಚ್೯ ತಿಂಗಳಿನಲ್ಲಿ ಸ್ವಾಮೀಜಿಗಳಿಂದ ಕೇಂದ್ರ ಉದ್ಘಾಟನೆಗೊಳ್ಳಲಿದೆ, ಸಂಸ್ಥೆಯ ಅನ್ನಪೂರ್ಣ ಪೌಷ್ಠಿಕ ಯೋಜನೆಯು ಈ ಕೇಂದ್ರದಲ್ಲಿ ಆರಂಭವಾಗಲಿದ್ದು ಗರ್ಭಿಣಿಯರು ಇದರ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಬಿ.ಆರ್. ಧೃವ ಉಲ್ಲಾಸ್, ಬೆನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್. ಶಿಲ್ಪಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.
ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆ; ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ
ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ, ತಾಲೂಕಾಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಹೋಬಳಿ ಅಧ್ಯಕ್ಷ ರಾಜು ಕೆಂಚಿಕೊಪ್ಪ, ಶ್ರೀನಿವಾಸ ಭಟ್, ಮಧುರ ಭಟ್, ಮಂಜಪ್ಪ, ಶ್ರೀ ಸತ್ಯಾಸಾಯಿ ಸರ್ವನಿಕೇತನಮ್ ಸಂಸ್ಥೆಯ ಆಚಾರ್ಯರು, ಗುರು ಮಾತೆಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು, ಸಂಸ್ಥೆಯ ವಿದ್ಯಾರ್ಥಿಗಳು ಇದ್ದರು. ಗುರುಮಾತೆ ರೇಖಾ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.