ಉಡುಪಿ: ಸಂಸದರನ್ನು ಭೇಟಿ ಮಾಡುವ ಅವಕಾಶವನ್ನು ತಪ್ಪಿಸಿದ ಶಾಸಕರ ವಿರುದ್ಧ ಸಾರ್ವಜನಿಕರು ಕೋಪಗೊಂಡು ದೇವಾಲಯದಲ್ಲಿ ಪೂಜೆ ಮಾಡಿಸಿ ಶಾಪ ಹಾಕಿದ್ದಾರೆ. ಈ ಘಟನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಕೆಂಚನೂರು ಗ್ರಾಮದಲ್ಲಿರುವ ಬ್ರಹ್ಮಯಕ್ಷೆ ದೇವಾಲಯದಲ್ಲಿ ಸಂಭವಿಸಿದೆ.
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಕೆಂಚನೂರು ಗ್ರಾಮದ ಬ್ರಹ್ಮಯಕ್ಷೆ ದೇವಾಲಯಕ್ಕೆ ಭೇಟಿ ನೀಡುವುದಾಗಿ ತಿಳಿದು ಬಂದಿತ್ತು. ಸಂಸದರನ್ನು ಭೇಟಿ ಮಾಡಲು ನೂರಾರು ಜನ ಸ್ಥಳೀಯರು ಕಾತರದಿಂದ ಕಾಯುತ್ತಿದ್ದರು. ಆದರೆ ಸ್ಥಳೀಯರು ಸಂಸದರನ್ನು ಭೇಟಿ ಮಾಡುವ ಅವಕಾಶವನ್ನು ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ ತಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಸದ ರಾಘವೇಂದ್ರ ಹಾಗೂ ಶಾಸಕ ಸುಕುಮಾರ್ ಶೆಟ್ಟಿ ಜತೆಯಾಗಿ ದೇವಾಲಯಕ್ಕೆ ಕಾರ್‌ನಲ್ಲಿ ಆಗಮಿಸುತ್ತಿದ್ದರು. ಆದರೆ, ಅಲ್ಲಿ ಶಾಸಕ ಸುಕುಮಾರ್ ಶೆಟ್ಟಿ, ರಾಘವೇಂದ್ರ ಅವರನ್ನು ಕಾರ್‌ನಿಂದ ಕೆಳಗೆ ಇಳಿಯದಂತೆ ತಡೆದಿದ್ದಾರೆ. ಶಾಸಕರು ಹೀಗೆ ಮಾಡಿದ್ದು ಸ್ಥಳೀಯರಗೆ ಅಸಮಾಧಾನ ಉಂಟುಮಾಡಿದೆ. ಹಾಗೂ ಶಾಸಕರ ಮೇಲಿನ ತೀವ್ರ ಕೋಪಕ್ಕೆ ಕಾರಣವಾಗಿದೆ.
ಅಲ್ಲಿನ ಸಾರ್ವಜನಿಕರಿಗೆ ಶಾಸಕರು ಅನ್ಯಾಯ ಮಾಡಿದರು ಎಂದು ಸ್ಥಳೀಯರು ಮನನೊಂದಿದ್ದಾರೆ. ಇದೇ ಕಾರಣಕ್ಕೆ ಬ್ರಹ್ಮ ಯಕ್ಷೆ ದೇವಾಲಯದಲ್ಲಿ ಮಂಗಳಾರತಿ ಸೇವೆ ನೀಡಿ ಶಾಸಕರಿಗೆ ಹಿಡಿ ಶಾಪ ಹಾಕಿದ್ದಾರೆ.
ಇದನ್ನೂ ಓದಿ: ಉಡುಪಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜಿನಾಮೆ