ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ (Government Primary School) ಕಾಯಂ ಶಿಕ್ಷಕರನ್ನು (Permanent Teachers) ನೇಮಕ (Appointment) ಮಾಡಲು ಒತ್ತಾಯಿಸಿ, ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳೊಂದಿಗೆ ಬುಧವಾರ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ (Protest) ನಡೆಸಿದರು.
ದುಬಾರತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲ, ಈ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 15 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರಿಲ್ಲದೇ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಬಿಇಒ ಕಚೇರಿಯ ಮುಂದೆ ಕುಳಿತ ಪ್ರತಿಭಟನಾಕಾರರು
ಬಿಇಒ ಕಚೇರಿಗೆ ತೆರಳಿ ಮನವಿ ಮಾಡಿದ ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಇಂದೇ ಖಾಯಂ ಶಿಕ್ಷಕರನ್ನು ನೀಡದಿದ್ದಲ್ಲಿ ಮಕ್ಕಳನ್ನು ಅಲ್ಲೇ ಬಿಡುತ್ತೇವೆ. ಮಕ್ಕಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: Drought Situation : ರಾಜ್ಯದ 195 ತಾಲೂಕುಗಳು ಬರಪೀಡಿತ; ಕಂದಾಯ ಸಚಿವ ಕೃಷ್ಣಬೈರೇಗೌಡ ಘೋಷಣೆ, ಕೇಂದ್ರಕ್ಕೆ ವರದಿ
ದುಬಾರತಟ್ಟಿ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ 16 ಕಿ.ಮೀ ದೂರದ ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಪ್ರಮುಖರಾದ ನಾಗೇಶ್, ಇದಾಯತ್, ಗಫರ್, ಗಣೇಶ್, ಮಾರುತಿ, ರಮೇಶ್, ನಾಗೇಶ, ರಾಘವೇಂದ್ರ, ಕಿಶೋರ ನಗರ, ಸಲೀಂ, ಇಜಾದ್, ಜನಾತ್, ಪಲ್ಲವಿ, ಶಶಿಕಲಾ, ಜಯಕ್ಕ, ಆಸ್ಮಾ, ಅಲುಮೇರ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: UPI Payment: ತಪ್ಪು ಯುಪಿಐ ವಿಳಾಸಕ್ಕೆ ಹಣ ಪಾವತಿಸಿದಿರಾ? ಅದನ್ನು ಮರಳಿ ಪಡೆಯೋದು ಹೇಗೆ?
ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದೇವೆ
ದುಬಾರತಟ್ಟಿ ಗ್ರಾಮದ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಎರಡು ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ, ಸದರಿ ಶಾಲೆಯಲ್ಲಿ ತರಗತಿಗಳು ಹಾಗೂ ಪಾಠ ಪ್ರವಚನಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ 14,500 ಶಿಕ್ಷಕರುಗಳ ನೇಮಕಾತಿ ಆದೇಶವನ್ನು ನೀಡಲು ಸನ್ನದ್ದವಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಖಾಯಂ ಶಿಕ್ಷಕರುಗಳ ನೇಮಕವಾಗಲಿದೆ.
-ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಸನಗರ ತಾಲೂಕು