Site icon Vistara News

ಶಿಕ್ಷಕರ ಕೊರತೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿದ್ಯಾರ್ಥಿಗಳಿಂದ ಪ್ರತಿಭಟನೆ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ 38 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಪಾಠ ಹೇಳಿಕೊಡುವ ಶಿಕ್ಷಕರ ಸಂಖ್ಯೆ 2. ಪಾಠ ಮಾಡಲು ಶಿಕ್ಷಕರು ಬೇಕು ಎಂದು ಮಕ್ಕಳೂ ಆಗ್ರಹಿಸಿದರು. ಹುಣಸವಳ್ಳಿ ಶಾಲೆಯಲ್ಲಿ ಈ ಹಿಂದೆ ಇದ್ದಿದ್ದೇ ಮೂವರು ಶಿಕ್ಷಕರು ಅದರಲ್ಲೂ ಈಗ ಪೈಕಿ ಒಬ್ಬರ ವರ್ಗಾವಣೆ ಆಗಿದೆ.

ಇದನ್ನೂ ಓದಿ| ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಆದ್ಯತೆ: ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಆ ಜಾಗಕ್ಕೆ ಇಲ್ಲಿಯವರೆಗೆ ಯಾವ ಶಿಕ್ಷಕರೂ ಬಂದಿಲ್ಲ, ಒಂದೆರಡು ದಿನದಲ್ಲಿ ಶಿಕ್ಷಕರು ಬರುವುದಾಗಿ ಬಿಇಒ ಭರವಸೆ ನೀಡಿದ್ದರು. 15 ದಿನವಾದರೂ ಯಾವ ಶಿಕ್ಷಕ ಕೂಡ ಬಂದಿಲ್ಲ. ಮಕ್ಕಳ ಪಾಲಕರರು ಸಹ ಶಿಕ್ಷಣ ಇಲಾಖೆಯ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ|ತರಗತಿ ಬಹಿಷ್ಕಾರ, ದೂರು: ಬೆಂಗಳೂರು ವಿಶ್ವವಿದ್ಯಾಲಯ ಸಂಪೂರ್ಣ ಸ್ತಬ್ಧ

Exit mobile version