ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (Car) ವಿದ್ಯುತ್ ಕಂಬಕ್ಕೆ (Electric Pole) ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾದ ಘಟನೆ ಸಮೀಪದ ಗರ್ತಿಕೆರೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಘಟನೆಯ ಹಿನ್ನೆಲೆ
ತೀರ್ಥಹಳ್ಳಿ ಕಡೆಯಿಂದ ಸಾಗರಕ್ಕೆ ತೆರಳುತಿದ್ದ ಮಾರುತಿ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಕಾರಿನಲ್ಲಿ ಸಾಗರ ಮೂಲದ ಒಂದೇ ಕುಟುಂಬದ ಐವರು ಪ್ರಯಾಣಿಸುತಿದ್ದರು.
ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕಾರನ್ನು ಚಲಾಯಿಸುತಿದ್ದ ಎಲೋನ್ ಲೋಫಿಸ್(52) ರವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.
ಎಲೋನ್ ಲೂಫಿಸ್ (48) ದೀಪ್ತಿ ಲೊಫಿಸ್ (43), ಮಾರ್ಗರೇಟ್ ಲೂಫಿಸ್(43) ಅವರಿಗೂ ತೀವ್ರವಾದ ಪೆಟ್ಟಾಗಿದ್ದು, ನಾಲ್ವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ರತೀಕ್ (16) ಎಂಬಾತನಿಗೆ ಸಣ್ಣಪುಟ್ಟ ಗಾಯಾಗಳಾಗಿವೆ ಎಂದು ತಿಳಿದುಬಂದಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.