Site icon Vistara News

Shimoga News | 100 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸ್ಪೋರ್ಟ್ಸ್ ಕಾoಪ್ಲೆಕ್ಸ್ ಶೀಘ್ರ ಪ್ರಾರಂಭ: ಬಿ.ವೈ ರಾಘವೇಂದ್ರ

Inter College Athletics games MP B. Y Raghavendra

ಶಿವಮೊಗ್ಗ : (Shimoga News) ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯ ನೀಡಬೇಕೆಂಬ ಅಪೇಕ್ಷೆ ಇದೆ. ಈ ನಿಟ್ಟಿನಲ್ಲಿ ಕೃಷಿ ಕಾಲೇಜಿನ ಪಕ್ಕದಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರದಿಂದ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಟ್ಟದ ‘ಸ್ಪೋರ್ಟ್ಸ್ ಕಾoಪ್ಲೆಕ್ಸ್’ ಕೆಲಸವನ್ನು ಶೀಘ್ರ ಪ್ರಾರಂಭಿಸುತ್ತೇವೆ ಎಂದು ಸಂಸದ ಬಿ. ವೈ ರಾಘವೇಂದ್ರ ತಿಳಿಸಿದರು.

ಸಹ್ಯಾದ್ರಿ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ’35ನೇ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 2022-23 ಅವರು ಭಾಗವಹಿಸಿ ಮಾತನಾಡಿ, ವಿಜೇತ ಕ್ರೀಡಾ ಪಟುಗಳಿಗೆ ಪ್ರಶಸ್ತಿ ವಿತರಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂಡಿಯನ್ ಒಲಿಂಪಿಕ್ಸ್ ಮೊದಲ ಮಹಿಳಾ ಅಧ್ಯಕ್ಷರಾಗಿ ಚಿನ್ನದ ರಾಣಿ ಪಿ ಟಿ ಉಷಾ ಅವರನ್ನು ಆಯ್ಕೆ ಮಾಡಿದ್ದಾರೆ. ಈ ವರ್ಷ 124 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2036ರಲ್ಲಿ ಭಾರತ ದೇಶ ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜನೆ ಮಾಡಲಿರುವುದು ದೇಶದ ಸ್ಪರ್ಧಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಜಿ, ಧನಂಜಯ, ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ, ವಿರೂಪಾಕ್ಷ, ಡಾ. ಎಂ.ಕೆ. ವೀಣಾ, ಗಿರೀಶ್ ಕಾರಂತ್, ಸಿಂಡಿಕೇಟ್ ಸದಸ್ಯರಾದ ಬಳ್ಳೆಕೆರೆ ಸಂತೋಷ್, ಎಸ್ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ | Kodi Mutt Swamiji | ಕೊರೊನಾ ಬಗ್ಗೆ ಭಯಬೇಡ ಎಂದ ಕೋಡಿಮಠ ಶ್ರೀಗಳಿಂದ ಭೂಮಿ ಹೊತ್ತಿ ಉರಿಯುವ ಬಗ್ಗೆ ಪ್ರಸ್ತಾಪ!

Exit mobile version