ಶಿವಮೊಗ್ಗ: (Shimoga News) ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಬೇಕು (Halal Issue) ಮತ್ತು ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ಸ್ಥಾಪನೆಗೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ (ಡಿ.೧೪) ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಅನಧಿಕೃತವಾಗಿ ಧರ್ಮದ ಆಧಾರದ ಮೇಲೆ ಹಲಾಲ್ ಲೋಗೊ ಇರುವ ಪ್ರಮಾಣ ಪತ್ರವನ್ನು ಮತಾಂಧ ಸಂಘಟನೆಗಳು ಸಾರ್ವಜನಿಕರು ಉಪಯೋಗ ಮಾಡುವ ಉತ್ಪನ್ನಗಳ ಮೇಲೆ ಮುದ್ರಣ ಮಾಡಿ, ಸಾವಿರಾರು Krio Librari ಯನ್ನು ಸಂಗ್ರಹ ಮಾಡಿ, ಅದನ್ನು ದೇಶ ವಿರೋಧಿ ಚಟುವಟಿಕೆಗೆ ಉಪಯೋಗ ಮಾಡಲಾಗುತ್ತಿದೆ. ಕೇಂದ್ರ ಸರಕಾರದ FSSAI ಅಧಿಕೃತ ಪ್ರಮಾಣಪತ್ರ ನೀಡುವ ಸಂಸ್ಥೆ ಇರುವಾಗಲೂ ಕೇವಲ ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದು ಸಂವಿಧಾನ ಬಾಹಿರವಾಗಿದೆ. ಇದನ್ನು ಕೂಡಲೇ ನಿಷೇಧ ಮಾಡಬೇಕು. ಹಲಾಲ್ ಪ್ರಮಾಣ ಪತ್ರ ನೀಡುವ ಹಣ ದೇಶದ್ರೋಹಿ ಚಟುವಟಿಕೆಗೆ ಉಪಯೋಗದ ಬಗ್ಗೆ ತನಿಖೆ ಮಾಡಬೇಕು ಮತ್ತು ಇದನ್ನು ತಡೆಯಲು ಮುಂದಿನ ಚಳಗಾಲದ ಅಧಿವೇಶನದಲ್ಲಿ ‘ಹಲಾಲ್ ಪ್ರಮಾಣಪತ್ರ’ ನಿಷೇಧ ಮಾಡುವ ಕಾಯಿದೆ ಬರಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ | IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?
ಇದಲ್ಲದೆ, ಲವ್ ಜಿಹಾದ್ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ ‘ಲವ್ ಜಿಹಾದ್ ಹೆಸರಿನ ಅಪರಾಧಗಳನ್ನು ದಾಖಲಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ನೀಡಲಾಯಿತು.
ಹಿಂದೂ ಧರ್ಮೀಯರಿಗೆ ಅವಮಾನ
ಸಮಿತಿಯ ಮುಖಂಡ ವಿಜಯ ರೇವಣ್ಣ ಮಾತನಾಡಿ, ಪ್ರಸ್ತುತ ಇಸ್ಲಾಮಿ ಸಂಸ್ಥೆಗಳು, ಪ್ರತಿಯೊಂದು ಪದಾರ್ಥ ಮತ್ತು ವಸ್ತುವನ್ನು ಇಸ್ಲಾಮಿಗಳಿಗನುಸಾರ ಕಾನೂನು ಬದ್ಧ ಅಂದರೆ ‘ಹಲಾಲ್’ ಆಗಿರುವುದರ ಬೇಡಿಕೆಯನ್ನು ಮಾಡುತ್ತಿದೆ. ಇದು ಕೇವಲ ಮಾಂಸಕ್ಕಷ್ಟೇ ಸೀಮಿತವಾಗಿರದೆ ಇಲೆಕ್ಟ್ರಾನಿಕ್, ಔಷಧ, ಧಾನ್ಯ, ಹಣ್ಣು ಸೌಂದರ್ಯವರ್ಧಕಗಳು, ಕಟ್ಟಡ ಕಾಮಗಾರಿ ಉಪಕರಣ, ಇತ್ಯಾದಿ ಉತ್ಪನ್ನಗಳು, ಹಲಾಲ್ ದೃಢೀಕೃತವಾಗಿರಬೇಕು ಎಂಬ ಬೇಡಿಕೆಯನ್ನು ಮಾಡಲಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು 100 ಪ್ರತಿಶತ ಹಲಾಲ್ ಪದಾರ್ಥವನ್ನು ಮಾರಾಟ ಮಾಡಿ ಭಾರತದಲ್ಲಿನ ಬಹುಸಂಖ್ಯಾತ ಹಿಂದೂ ಧರ್ಮೀಯರ ಅವಮಾನ ಮಾಡುತ್ತಿವೆ. ಇಸ್ಲಾಮಿನ ಮೇಲಾಧಾರಿತ ಹಲಾಲ್ ವ್ಯವಸ್ಥೆಯನ್ನು ಇಸ್ಲಾಮೇತರ ಸಮಾಜದವರ ಮೇಲೆ ಹೇರುವುದು ಅವರ ಸಾಂವಿಧಾನಿಕ, ಧಾರ್ಮಿಕ ಹಕ್ಕುಗಳ ವಿರುದ್ಧವಾಗಿದೆ ಎಂದರು.
ಅದಲ್ಲದೇ, ಪ್ರೇಮದ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಗೊಳಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಉಡುಪಿ, ಸೇರಿದಂತೆ ರಾಜ್ಯಾದ್ಯಂತ ಲವ್ ಜಿಹಾದ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ವ್ಯಾಪಕವಾಗಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್’ಗೆ ಮತಾಂತರ ಮಾಡುವ ಘಟನೆಗಳು ನಡೆಯುತ್ತಿವೆ. ಲವ್ ಜಿಹಾದ್ ಪ್ರಕರಣಗಳಲ್ಲಿ ಪಿ.ಎಫ್.ಐ. ನ ಶಾಹಿನ್ ಗ್ಯಾಂಗ್ ಎಂಬ ಮುಸಲ್ಮಾನ ಯುವತಿಯರ ಸಂಘಟನೆ, ಮದರಸಾ ಮತ್ತು ಮಸೀದಿಗಳ ಮೌಲ್ಯಗಳು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅಂತಹ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ತಕ್ಷಣವೇ ನಿಷೇಧಿಸಬೇಕು. ಇದೆಲ್ಲದಕ್ಕೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳದ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | India-China trade | ನಿರ್ಬಂಧಗಳ ಹೊರತಾಗಿಯೂ ಚೀನಾದ ಜತೆಗೆ ಭಾರತದ ವ್ಯಾಪಾರ ಗಣನೀಯ ಹೆಚ್ಚಳ