ಶಿವಮೊಗ್ಗ : ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗುರುವಾರ ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ಮೇ 10 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ಮೇ 11 ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದು, ಮೇ 13ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಮೇ 20ರಂದು ಅವಶ್ಯವಿದ್ದರೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮೇ 21 ಮರು ಮತದಾನ ದಿನವಾಗಿದೆ. ಮೇ 22ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ : ಏರ್ ಏಷ್ಯಾವನ್ನೂ ಖರೀದಿಸಲು ಮುಂದಾದ TATA: ಪೂರ್ಣ ಮಾಲೀಕತ್ವ ಕುರಿತು ಪ್ರಸ್ತಾಪ
ಸ್ಥಾನಗಳ ವಿವರ :
ಶಿವಮೊಗ್ಗ ತಾಲ್ಲೂಕಿನ ಗೌತಮಪುರ ಗ್ರಾ.ಪಂ ಯ ಕಣ್ಣೂರು-2, ಅನುಸೂಚಿತ ಪಂಗಡ ಮಹಿಳೆ, ಸೈದೂರು ಗ್ರಾಮ ಪಂಚಾಯತಿಯ ತಡಗಳಲೆ-2, ಹಿಂದುಳಿದ ವರ್ಗʼಬʼ, ಹಾಗೂ ಶಿಕಾರಿಪುರ ತಾಲ್ಲೂಕಿನ ಗೊಗ್ಗ-2, ಅನುಸೂಚಿತ ಪಂಗಡ, ಮಹಿಳೆ, ಬೇಗೂರು ಗ್ರಾ.ಪಂಚಾಯತಿಯ ಬೇಗೂರು-1, ಸಾಮಾನ್ಯ ಮಹಿಳೆ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿವೆ.
ಈ ಚುನಾವಣೆಯನ್ನು ಬ್ಯಾಲಟ್ ಬಾಕ್ಸ್‌ಗಳ ಮೂಲಕ ನಡೆಸಲಾಗವುದು. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾ.ಪಂ ಚುನಾವಣೆಗಳ ಮತಪತ್ರದಲ್ಲಿ ‘NOTA’ ಅವಕಾಶವಿರುವುದಿಲ್ಲ. ಚುನಾವಣಾ ಕಾರ್ಯ ನಿರ್ವಹಿಸಲು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರ ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ :
ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿನಿಂದ ಮೇ 22 ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಡಾ. ಶಿವಕುಮಾರ ಸ್ವಾಮೀಜಿಯವರ ನುಡಿಯೇ ಪ್ರೇರಣೆ: ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ರಸಾದ್