ಶಿವಮೊಗ್ಗ: ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗದ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸುವ ಮೂಲಕ ಸಾಧನೆಗೈದಿದ್ದಾರೆ. ಮೇ 16 ರಿಂದ ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬಾಕ್ಸಿಂಗ್ ಕ್ರೀಡೆ ಆಯೋಜಿಸಲಾಗಿತ್ತು.
ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಕ್ರೀಡಾಪಟುಗಳಾದ ಜೈನ್ ಪಬ್ಲಿಕ್ ಶಾಲೆಯ ಮದಿಯಾ ಇಬ್ರಾಹಿಂ, 46-49 ಕೆ.ಜಿ. ವಿಭಾಗದಲ್ಲಿ, ಸವಳಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ್, 58-61 ಕೆ.ಜಿ. ವಿಭಾಗದಲ್ಲಿ, ಬೊಮ್ಮನಕಟ್ಟೆಯ ರಾಮಕೃಷ್ಣ ಶಾಲೆಯ ವಂಶಿ 61-64 ಕೆ.ಜಿ. ವಿಭಾಗದಲ್ಲಿ ಮತ್ತು ಕಸ್ತೂರಭಾ ಶಾಲೆಯ ಕಾವ್ಯ 49-52 ಕೆ.ಜಿ. ವಿಭಾಗದಲ್ಲಿ ತೃತೀಯ ಪದಕ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕ್ರೀಡಾಪಟುಗಳ ಕೋಚ್ ವೆಂಕಟೇಶ್‌ರವರಿಗೆ ಹಾಗೂ ಕ್ರೀಡಾಪಟುಗಳಿಗೆ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ಶಿವಮೊಗ್ಗ ವಿನೋದ್ ಅವರು ಅಭಿನಂದಿಸಿದ್ದಾರೆ. ಕಳೆದ ಬಾರಿ ನಡೆದ ಮಿನಿ ಒಲಿಂಪಿಕ್ಸ್‌ನಲ್ಲಿ ಜಿಲ್ಲೆಗೆ 1 ಪದಕ ಬಂದಿದ್ದವು. ಈ ವರ್ಷ 4 ಪದಕಗಳು ಬಂದಿದ್ದು ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮಹಿಳಾ ಹಾಕಿ ತಂಡಕ್ಕೆ ಕೊಡಗಿನ ಕೊಡುಗೆ!