ಶಿಕಾರಿಪುರ: ಬಡವರ ಪರ ಕಾರ್ಯಕ್ರಮ ಮೂಲಕ ರಾಜಕಾರಣ ಮಾಡುವುದು ಕಾಂಗ್ರೆಸ್ (Congress). ಆದರೆ ಭಾವನಾತ್ಮಕ ರಾಜಕೀಯದ ಮೂಲಕ ಬಡವರ ಬದುಕು ಬೀದಿಗೆ ತರುವ ಬಿಜೆಪಿಯನ್ನು (BJP) ಜಿಲ್ಲೆಯಿಂದ ಕಿತ್ತೊಗೆಯುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿಯವರು ಒಡೆದಾಳುವ ಭಾವನಾತ್ಮಕ ರಾಜಕೀಯ ಮಾಡುತ್ತಾ ಜನರ ಹಿತ ಮರೆತಿದ್ದರು, ಅದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Libya flood: ಲಿಬಿಯಾದಲ್ಲಿ ಚಂಡಮಾರುತ, ಪ್ರವಾಹ; 20,000ಕ್ಕೂ ಅಧಿಕ ಮಂದಿ ಸಾವು
ಶಿವಮೊಗ್ಗ ಜಿಲ್ಲೆಯಿಂದಲೇ ಬಿಜೆಪಿ ಕಿತ್ತೊಗೆಯುವ ಕೆಲಸ ಮುಂಬರುವ ಚುನಾವಣೆಯಲ್ಲಿ ಆಗಬೇಕಿದೆ, ಅದಕ್ಕಾಗಿ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಧ್ಯಕ್ಷ ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಮೋದಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೋ ಅಲ್ಲಲ್ಲಿ ಬಿಜೆಪಿ ಸೋತಿದೆ, ರಾಹುಲ್ ಗಾಂಧಿ ಎಲ್ಲಿ ಪಾದಯಾತ್ರೆ ನಡೆಸಿದ್ದಾರೆ ಅಲ್ಲಿ ಪಕ್ಷ ಗೆದ್ದಿದೆ ಎಂದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಬಡವರ ಪ್ರಗತಿಗೆ ಕಾರ್ಯಕ್ರಮ ನೀಡಿದರೆ ಜನತ ಕೈ ಹಿಡಿಯುತ್ತಾರೆ ಎನ್ನುವುದಕ್ಕೆ ವಿಧಾನಸಭೆ ಚುನಾವಣೆ ಸಾಕ್ಷಿಯಾಗಿದೆ. ಸರ್ಕಾರ ಇರುವುದೇ ಬಡವರಿಗೆ ನೆರವಾಗಲು ಹೊರತು ಸ್ವಂತಕ್ಕೆ ಹಣ ಮಾಡಿಕೊಳ್ಳಲು ಅಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ನಾಗರಾಜ್ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: Famous Ganesha Temples: ಭಕ್ತರ ಮನಸ್ಸಿಗೆ ನೆಮ್ಮದಿ ನೀಡುವ ತಾಣ, ಕರ್ನಾಟಕದ ಪ್ರಮುಖ ಗಣಪತಿ ದೇವಸ್ಥಾನಗಳಿವು
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್, ಆರ್. ಎಂ. ಮಂಜುನಾಥ್ ಗೌಡ ಕಲಗೋಡು ರತ್ನಾಕರ್, ಮಹದೇವಪ್ಪ, ಗೋಣಿ ಮಾಲ್ತೇಶ್, ಮಾರವಳ್ಳಿ ಉಮೇಶ್, ರಾಘವೇಂದ್ರ ನಾಯಕ, ಭಂಡಾರಿ ಮಾಲತೇಶ್, ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ್, ಪಾರಿವಾಳ ಶಿವರಾಂ, ಬಿ.ಕೆ .ಮಂಜಪ್ಪ ಕಲ್ಮನೆ ಮುತ್ತಿತರು ಹಾಜರಿದ್ದರು.