Site icon Vistara News

Shivamogga News: ಕನ್ನಳ್ಳಿಯಲ್ಲಿ ಅಕ್ರಮ ಮರ ಕಡಿತಲೆ ಆರೋಪ; ಧರಣಿ ಸ್ಥಳಕ್ಕೆ ಸಂಸದ ರಾಘವೇಂದ್ರ

Shivamogga News Allegation of illegal tree felling in kannali protest by villagers MP B Y Raghavendra Visit

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ಕೆಲವು ಸದಸ್ಯರು ಸೇರಿ ಕನ್ನಳ್ಳಿ ಗ್ರಾಮದಲ್ಲಿ ಅಕ್ರಮ ಮರ ಕಡಿತಲೆ (Illegal Tree Felling) ಮಾಡಿ ಮಾರಾಟ (Sale) ಮಾಡಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ನಡೆಸುತ್ತಿರುವ ಆಹೋರಾತ್ರಿ ಧರಣಿ ಸ್ಥಳಕ್ಕೆ ಸಂಸದ ಬಿ.ವೈ. ರಾಘವೇಂದ್ರ (MP B.Y. Raghavendra) ಭೇಟಿ ನೀಡಿದರು.

ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬೆಳೆಸಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಕೇಶಿಯಾ ಮರಗಳನ್ನು ಹರಾಜು ಪ್ರಕ್ರಿಯೆ ಇಲ್ಲದೇ ಕಡಿತಲೆ ಮಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕೆಲವು ಸದಸ್ಯರು ಸೇರಿ ಕಾನೂನು ಬಾಹಿರವಾಗಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಶುಕ್ರವಾರದಿಂದ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಸಂಸದ ಬಿ.ವೈ. ರಾಘವೇಂದ್ರ ಭಾನುವಾರ ಭೇಟಿ ನೀಡಿದರು.

ಇದನ್ನೂ ಓದಿ: US Open 2023: ಯುಎಸ್‌ ಓಪನ್‌ ಜಯದ ಬಳಿಕ ವಿಶೇಷ ಟಿ ಶರ್ಟ್‌ ಧರಿಸಿ ಮನ ಗೆದ್ದ ಜೋಕೊವಿಕ್‌

ಈ ವೇಳೆ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅಧಿಕಾರಿಗಳ ವಿರುದ್ದ ಹರಿಹಾಯ್ದರು, ಅಕ್ರಮವಾಗಿ ಮರ ಕಟಾವಿಗೆ ಅನುಮತಿ ನೀಡಿದ ಅಧಿಕಾರಿಗಳು ಮತ್ತು ಸಹಕಾರ ನೀಡಿದ ಗ್ರಾಮ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Asia Cup 2023 : ಏಷ್ಯಾ ಕಪ್​ ಫೈನಲ್ ಪಂದ್ಯ ಪಲ್ಲೆಕೆಲೆಗೆ ಶಿಫ್ಟ್​

ಗ್ರಾಮ ಆಡಳಿತದ ಬಗ್ಗೆ ಆರೋಪಿಸಿದ ಪ್ರತಿಭಟನಾಕಾರರು, ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗುತ್ತಿಗೆದಾರ ವ್ಯಕ್ತಿವೊಬ್ಬರಿಗೆ ಹೊಂದಾಣಿಕೆ ಮೂಲಕ ಅಕ್ರಮವಾಗಿ ಕಡಿತಲೆ ಮಾಡಲು ಅನುಮತಿ ನೀಡಿ ಗುತ್ತಿಗೆದಾರರಿಂದ 10 ಲಕ್ಷಕ್ಕೂ ಹೆಚ್ಚಿಗೆ ಹಣ ಪಡೆದುಕೊಂಡು ಅಕ್ರಮ ವೆಸಗಿದ್ದಾರೆ, ಅರಣ್ಯ ಇಲಾಖೆ ಸಹ ಅಕ್ರಮ ಕಡಿತಲೆ ಮಾಡಲು ಗುತ್ತಿಗೆದಾರರಿಗೆ ಸಂಪೂರ್ಣ ಅವಕಾಶ ನೀಡಿದ್ದಾರೆ, ಅರಣ್ಯ ಇಲಾ ಖೆಗೆ ಮತ್ತು ಸಂಚಾರಿ ದಳಕ್ಕೆ ಸಾರ್ವಜನಿಕರು ದೂರು ನೀಡಿದರೂ ನ್ಯಾಯ ಸಮ್ಮತವಾಗಿ ಅರಣ್ಯ ಇಲಾಖೆ ವರ್ತಿಸುತ್ತಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಬಳಿ ದೂರು ಸಲ್ಲಿಸಿದರು.

Exit mobile version