ರಿಪ್ಪನ್ಪೇಟೆ: ಮನೆಯ ಅಂಗಳದಲ್ಲಿ ಒಣಗಿಸಿಟ್ಟ ಲಕ್ಷಾಂತರ ರೂಪಾಯಿಗಳ ಮೌಲ್ಯದ ಅಡಿಕೆ (Arecanut) ಕಳ್ಳತನವಾಗಿರುವ ಘಟನೆಯು ಪಟ್ಟಣದ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕ್ವಾಡ್ರಿಗೆ ಗ್ರಾಮದಲ್ಲಿ ಜರುಗಿದೆ.
ಕ್ವಾಡ್ರಿಗೆ ಗ್ರಾಮದ ಬಾಲರಾಜ್ ಎಂಬುವವರ ಮನೆಯ ಅಂಗಳದಲ್ಲಿ ಒಣಗಿಸಿಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಮೂರು ಕ್ವಿಂಟಾಲ್ಗೂ ಹೆಚ್ಚು ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಘಟನಾ ಸ್ಥಳಕ್ಕೆ ಪಟ್ಟಣದ ಪೊಲೀಸರು ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.