ರಿಪ್ಪನ್‌ಪೇಟೆ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ (Ayodhya Shree Ram Mandir) ಜ.22ರಂದು ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವದ ಆಮಂತ್ರಣ ಮತ್ತು ಮಂತ್ರಾಕ್ಷತೆ ವಿತರಣೆಯ ಅಂಗವಾಗಿ ಪಟ್ಟಣದ ವಿನಾಯಕ ವೃತ್ತಕ್ಕೆ ಅಯೋಧ್ಯೆ ಶ್ರೀರಾಮಮಂದಿರ ಮಂತ್ರಾಕ್ಷತೆಯ ಕುಂಭವು ಆಗಮಿಸುತ್ತಿದ್ದಂತೆ ಭವ್ಯ ಸ್ವಾಗತದೊಂದಿಗೆ, ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ: Scholarship for Students: ಈ ಯೋಜನೆಯಡಿ ಸಿಗಲಿದೆ ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ
ದೇವಸ್ಥಾನ ಸಮಿತಿಯ ಎನ್.ಸತೀಶ್ ಅವರು ಮಂತ್ರಾಕ್ಷತೆಯುಳ್ಳ ಕುಂಭವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತ ಸಮೂಹದೊಂದಿಗೆ ಭಕ್ತಿ ಶ್ರದ್ದೆಯಿಂದ ಶ್ರೀರಾಮನ ಜಯಘೋಷಣೆಯೊಂದಿಗೆ, ಶಿವಮೊಗ್ಗ ರಸ್ತೆಯಲ್ಲಿರುವ ಶ್ರೀ ವಿಘ್ನನಿವಾರಕ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿದರು. ಬಳಿಕ ದೇವಸ್ಥಾನದಲ್ಲಿ ಮಂತ್ರಾಕ್ಷತೆಯುಳ್ಳ ಕುಂಭಕ್ಕೆ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ: Money Guide: ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ನಿಯಮ ಮೀರಿದರೆ ದಂಡ ಖಚಿತ
ಈ ಸಂದರ್ಭದಲ್ಲಿ ಭಕ್ತಾಧಿಗಳಾದ ಆರ್.ಟಿ.ಗೋಪಾಲ, ಪದ್ಮಸುರೇಶ್, ಎಂ.ಸುರೇಶ್‌ಸಿಂಗ್, ಎಂ.ಬಿ.ಮಂಜುನಾಥ, ನಾಗರತ್ನ ದೇವರಾಜ್, ಲೀಲಾ ಉಮಾಶಂಕರ್, ಉಮಾ ಸುರೇಶ್, ಶೈಲಾ ಆರ್.ಪ್ರಭು, ರೇಖಾ ರವಿ, ಗೀತಾ, ದೇವರಾಜ್, ಈಶ್ವರಶೆಟ್ಟಿ, ಶ್ರೀನಿವಾಸ್ ಅಚಾರ್, ಸುಂದರೇಶ್, ಸುಧೀಂದ್ರ ಪೂಜಾರಿ, ಲಕ್ಷ್ಮಿ ಶ್ರೀನಿವಾಸ್, ಮಂಜಪ್ಪ,ಕಾರ್ತಿಕ ಎನ್.ನಾಯ್ಕ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.