ರಿಪ್ಪನ್‌ಪೇಟೆ: ದೇಶಿಯ ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ (Ayurvedic Treatment) ಸದೃಢ ಅರೋಗ್ಯ (Health) ಸಾಧ್ಯ, ಹಿಂದಿನ ಕಾಲದಲ್ಲಿಯೂ ನಮ್ಮ ಪೂರ್ವಿಕರು ಆಹಾರದ ಕ್ರಮದ ಮೂಲಕ ರೋಗವನ್ನು (Disease) ಹತೋಟಿಗೆ ತಂದು ಅದನ್ನು ಗುಣಪಡಿಸುವ ವ್ಯವಸ್ಥೆಯಿತ್ತು, ನಂತರ ಆಯುರ್ವೇದ ಚಿಕಿತ್ಸಾ ಪದ್ದತಿಯನ್ನಾಧರಿಸಿ ಮನೆಮದ್ದು ಸಿದ್ದಪಡಿಸಿ ರೋಗಿಗಳಿಗೆ ನೀಡುವುದರೊಂದಿಗೆ ಮಾರಕ ರೋಗವನ್ನು ಗುಣಪಡಿಸುವ ಪದ್ದತಿ ಇತ್ತು ಎಂದು ಹೊಂಬುಜ ಜೈನ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಆಯೋಜಿಸಲಾದ ಆಯುರ್ವೇದ ಶಿಬಿರ ದೃಢಬಲ ಸಮಾರಂಭದಲ್ಲಿ ಗಿಡಮೂಲಿಕೆಗಳ ವಸ್ತು ಪ್ರದರ್ಶನ ಉದ್ಘಾಟಿಸಿ, ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ “ಸಾತ್ವಿಕ ಆಹಾರ ಸೇವಿಸಿ, ಉತ್ತಮ ವಿಹಾರ ಕೈಗೊಳ್ಳುವುದನ್ನು ವೈದ್ಯರಾಗುವ ಆಯುರ್ವೇದ ವಿದ್ಯಾರ್ಥಿಗಳು. ಆಯುರ್ವೇದ ತಜ್ಞರಿಂದ ಮಾಹಿತಿ ಪಡೆದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ವಿಶಿಷ್ಟ ಸ್ಥಾನ-ಮಾನ-ಗೌರವ ದೊರೆಕಿಸುವಂತಾಗಲಿ” ಎಂದು ಶುಭ ಹಾರೈಸಿದರು.
ಇದನ್ನೂ ಓದಿ: BYJU’s Layoffs: ಮತ್ತೆ 5500 ಉದ್ಯೋಗ ಕಡಿತಕ್ಕೆ ಮುಂದಾದ ಬೈಜೂಸ್ ಕಂಪನಿ
ಜೈನ ಆಯುರ್ವೇದ ಪದ್ಧತಿ, ಔಷಧ ತಯಾರಿಕೆ, ಕುಂದಾದ್ರಿ ಬೆಟ್ಟದ ಅಮೂಲ್ಯ ಗಿಡಮೂಲಿಕೆಗಳ ಕುರಿತು ಶ್ರೀಗಳು ಉಲ್ಲೇಖಿಸುತ್ತಾ ಪೂಜ್ಯಪಾದ ಮುನಿಶ್ರೀಗಳ ಚಿಕಿತ್ಸಾ ಪದ್ಧತಿ ಸಂಶೋಧನೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೊಂಬುಜ ಅತಿಶಯ ಶ್ರೀಕ್ಷೇತ್ರವು ಮಾನಸಿಕ, ಶಾರೀರಿಕ, ಸ್ವಾಸ್ಥ್ಯ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಲಿದೆ ಎಂದರು.
ಇದನ್ನೂ ಓದಿ: Asian Games 2023: ಕೇವಲ ಒಂದು ಅಂಕದ ಅಂತರದಲ್ಲಿ ವಿಷ್ಣುಗೆ ಕೈತಪ್ಪಿದ ಬೆಳ್ಳಿ ಪದಕ
ವೈದ್ಯರಾದ ಡಾ. ಜೀವಂಧರ ಜೈನ್ ಮಾತನಾಡಿದರು. ಡಾ. ಅರ್ಹಂತ್ ಕುಮಾರ್, ಡಾ. ಆನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 150ಕ್ಕೂ ಅಧಿಕ ಆಯುರ್ವೇದ ವೈದ್ಯ, ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.