ಸಾಗರ: ವಿಳಾಸ (Address) ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮಾಂಗಲ್ಯ ಸರವನ್ನು (Chain) ಕಿತ್ತುಕೊಂಡು ಬೈಕ್‌ನಲ್ಲಿ (Bike) ಪರಾರಿಯಾದ ಘಟನೆ ವಿನೋಬಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.
ಇಲ್ಲಿನ ವಿನೋಬಾ ನಗರದ ವಿಜಯಮ್ಮ ಎಂಬುವವರು ಅಂಗಡಿಗೆ ಹೋಗಿ ಮನೆಗೆ ಹಿಂದಿರುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳಿದ್ದಾರೆ. ವಿಜಯಮ್ಮ ಅವರು ವಿಳಾಸ ಹೇಳುತ್ತಿದ್ದಾಗ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿದ್ದಾನೆ.
ವಿಜಯಮ್ಮ ಅವರು ತಮ್ಮ ಶಕ್ತಿಯನ್ನು ಉಪಯೋಗಿಸಿ ಮಾಂಗಲ್ಯ ಸರ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದಾಗ ಅವರ ಕುತ್ತಿಗೆಯ ಭಾಗಕ್ಕೆ ಗಾಯವಾಗಿದೆ. ಕಳ್ಳರು ಕೊನೆಗೂ ಮಾಂಗಲ್ಯ ಸರದ ಒಂದು ತುಂಡು ಸುಮಾರು 8 ಗ್ರಾಂ ಹರಿದುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ: HSRP Number Plate: ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ; ಅಳವಡಿಸದಿದ್ರೆ ಭಾರಿ ದಂಡ!
ವಿಜಯಮ್ಮ ಅವರ ಹೋರಾಟದ ಫಲವಾಗಿ 40 ಗ್ರಾಂ ಮಾಂಗಲ್ಯ ಸರದಲ್ಲಿ ಸುಮಾರು 8 ಗ್ರಾಂ ಮಾತ್ರ ಕಳ್ಳರ ಪಾಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.