Site icon Vistara News

Shivamogga News: ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ

Chandragutti Sri Renukamba Devi pallakki utsav meravanige

ಸೊರಬ: ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ (Chandragutti Sri Renukamba Devi) ಜಾತ್ರಾ ಮಹೋತ್ಸವವು ಮಾರ್ಚ್‌ 15 ರಿಂದ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಪರಿವಾರ ದೇವರುಗಳನ್ನು ಕರೆ ನೀಡುವ ಪದ್ಧತಿಯು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬುಧವಾರ (Shivamogga News) ನಡೆಯಿತು.

ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ದೇವಾಲಯದ ಗುಡ್ಡದ ಮೇಲಿರುವ ಪರಿವಾರ ದೇವರಾದ ಶ್ರೀ ಕೋಟೆ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದಂತೆ ಜಾತ್ರೆಗೆ ಕರೆ ನೀಡುವ ಪದ್ಧತಿ ನಡೆಯಿತು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಗ್ರಾಮದ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ದೇವಿಯ ದೇಗುಲದವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ಅರವಿಂದ್ ಭಟ್ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: Job Alert: ನ್ಯಾಷನಲ್‌ ಹೈಡ್ರೋಎಲೆಕ್ಟ್ರಿಕ್‌ ಪವರ್‌ ಕಾರ್ಪೋರೇಷನ್‌ನ 269 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಮಾತನಾಡಿ, ಜಾತ್ರಾ ಮಹೋತ್ಸವದ ಹಿನ್ನಲೆ ಧಾರ್ಮಿಕ ಕಾರ್ಯಗಳು ಚಾಲನೆಗೊಂಡಿವೆ . ಶ್ರೀ ದೇವಿಯ ಪರಿವಾರ ದೇವರುಗಳಿಗೆ ಜಾತ್ರೆಗೆ ಕರೆ ನೀಡುವ ಪದ್ಧತಿಗಳನ್ನು ನಡೆಸಲಾಗುತ್ತಿದೆ. ಗುರುವಾರ ಪರಿವಾರ ದೇವರಾದ ಶ್ರೀ ಬನಶಂಕರಿ ದೇವಾಲಯಕ್ಕೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ತೆರಳಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Semiconductor : ಧೊಲೆರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಘಟಕ, ಜಾಗತಿಕ ಭವಿತವ್ಯದಲ್ಲಿ ಏನಿದರ ಪ್ರಾಮುಖ್ಯ?

ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ, ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version