ರಿಪ್ಪನ್‌ಪೇಟೆ: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸುಲಭದಲ್ಲಿ ಹಣ (Money) ಮಾಡುವುದನ್ನೇ ಗುರಿಯನ್ನಾಗಿಸಿಕೊಂಡಿದ್ದು, (Target) ಶ್ರಮವಹಿಸಿ ದುಡಿಮೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.
ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿನ ಒಕ್ಕಲಿಗರ ಕುವೆಂಪು ಸಭಾಭವನದಲ್ಲಿ ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ 7 ದಿನಗಳ ಎನ್.ಎಸ್.ಎಸ್. ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಬಿರಾರ್ಥಿಗಳು ಶಿಬಿರದಲ್ಲಿ ಮಾಡುವ ಚಟುವಟಿಕೆಯನ್ನು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು, ತಾವು ಭಾವಿ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿ ಮುಂದಿನ ಯುವಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗುವಂತೆ ಮಾಡಿದಾಗ ಮಾತ್ರ ಇಂತಹ ಶಿಬಿರಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತದ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಇದನ್ನೂ ಓದಿ: Ganesh Chaturthi: ರಾಜ್ಯಾದ್ಯಂತ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಟಿ.ಎಂ.ಪೂರ್ಣಿಮಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ Su 30MKI: ಮೇಕ್ ಇನ್ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು-30 ಎಂಕೆಐ ಯುದ್ಧವಿಮಾನಆತಿಥಿಗಳಾಗಿ ಕೆರೆಹಳ್ಳಿ-ಹುಂಚಾ ಹೋಬಳಿಯ ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎಂ.ಬಿ.ಮಂಜುನಾಥ, ಒಕ್ಕಲಿಗರ ಸಮಾಜದ ಉಪಾಧ್ಯಕ್ಷ ಕಲ್ಲೂರು ತೇಜಮೂರ್ತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದೀಂದ್ರ ಪೂಜಾರಿ, ಸುಂದರೇಶ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹಸನಬ್ಬ, ಒಕ್ಕಲಿಗ ಸಮಾಜದ ಖಜಾಂಚಿ ಟ.ಎಂ.ಕೃಷ್ಣಮೂರ್ತಿ, ಶ್ರೀಧರ ಹಾಗೂ ಯೋಗೇಂದ್ರಗೌಡ, ತಾಲೂಕು ರೈತ ಸಂಘದ ಮುಖಂಡ ಕುಕ್ಕಳಲೇ ಈಶ್ವರಪ್ಪಗೌಡ ಪಾಲ್ಗೊಂಡಿದ್ದರು. ಈ ವೇಳೆ ಶಿಬಿರಾರ್ಥಿಗಳು ಹಾಗೂ ವಿದ್ಯಾಲಯದ ಸಿಬ್ಬಂದಿವರ್ಗ ಹಾಜರಿದ್ದರು.
ಇದನ್ನೂ ಓದಿ: Su 30MKI: ಮೇಕ್ ಇನ್ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು-30 ಎಂಕೆಐ ಯುದ್ಧವಿಮಾನ
ಪ್ರಾರ್ಥನಾ ಪ್ರಾರ್ಥಿಸಿದರು.ಸ್ವಾತಿ ವರದಿ ವಾಚನ ಮಾಡಿದರು, ,ಶಿಬಿರಾಧಿಕಾರಿ ಪ್ರಕಾಶ ಎನ್.ಜಿ.ಸ್ವಾಗತಿಸಿ, ವಂದಿಸಿದರು