ಸೊರಬ: ಮನುಷ್ಯ ಜೀವನಕ್ಕೆ ಪರಿಸರದ (Environment) ಕೊಡುಗೆ ಅಪಾರ, ನಾವಿಲ್ಲದೆ ಪರಿಸರ ಅಭಿವೃದ್ಧಿ ಆಗಬಲ್ಲದು. ಪರಿಸರ ಇಲ್ಲದ ನಮ್ಮ ಅಭಿವೃದ್ಧಿ (Development) ಸಾಧ್ಯವಿಲ್ಲ ಎಂದು ಜೇನು ಕೃಷಿಕ ಗೌತಮ್ ಬಿಚ್ಚುಗತ್ತಿ ಹೇಳಿದರು.
ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಜೇನು ಸಾಕಾಣಿಕೆ ಕುರಿತು ಯಲಸಿ ಗ್ರಾಮದ ತಮ್ಮ ಸುವರ್ಣ ವನದಲ್ಲಿ ತರಬೇತಿ ನೀಡಿ, ಅವರು ಮಾತನಾಡಿದರು.
ಇದನ್ನೂ ಓದಿ: Year Ender 2023 : ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾ ವೈಭವ ಈ ರೀತಿ ಇತ್ತು
ಯೋಜನೆಯ ಸದಸ್ಯರು ಸೊರಬ ತಾಲೂಕಿನ ಬೇರೆ ಬೇರೆ ಮಾದರಿ ಸ್ವ ಉದ್ಯೋಗ ಘಟಕಗಳನ್ನು ವೀಕ್ಷಿಸಿ ಸ್ವ-ಉದ್ಯೋಗ ಅಧ್ಯಯನ ಪ್ರವಾಸ ನಡೆಸಿದರು. ಚಂದ್ರಗುತ್ತಿ ಹೋಬಳಿ ಚನ್ನಪಟ್ಟಣ ಗ್ರಾಮದ ಜೀವಪ್ಪ ಅವರ ಕುರಿ ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆ ಘಟಕ, ತಿಮ್ಮಾಪುರದ ಕಲ್ಲಂಬಿಯವರ ಅಡಿಕೆ ಹಾಳೆ ತಟ್ಟೆ ತಯಾರಿಕೆ ಘಟಕಗಳಲ್ಲಿ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: Energy Efficiency: ಕರ್ನಾಟಕಕ್ಕೆ ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ
ಹಾನಗಲ್ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಮಾಲತೇಶ್ ಕೃಷಿಕರ ಉಪ ಆರ್ಥಿಕ ಸಂಪನ್ಮೂಲಗಳ ಸದ್ಬಳಕೆ ಕುರಿತು ಸದಸ್ಯರಿಗೆ ಪ್ರತ್ಯಕ್ಷ ವಿವರ ನೀಡಿದರು.