Site icon Vistara News

Shivamogga News: ಸೊರಬ; ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಪ್ರತಿಭಟನೆ

Demand to stop sale of illegal liquor protest in Soraba

ಸೊರಬ: ತಾಲೂಕಿನ ಹರೀಶಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಚಿಕ್ಕ ದ್ಯಾವಾಸ, ಹರೀಶಿ ಸರ್ಕಲ್ ಹಾಗೂ ಶ್ರೀನಗರದಲ್ಲಿ ಅಕ್ರಮವಾಗಿ ಮದ್ಯ (Illegal Liquor) ಮಾರಾಟ ಚಟುವಟಿಕೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವಂತೆ ಆಗ್ರಹಿಸಿ, ಶ್ರೀ ಭೂತೇಶ್ವರ ಯುವಕ ಸಂಘ, ಸ್ತ್ರೀ ಸಂಘ, ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಪಟ್ಟಣದ ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಬಕಾರಿ ನೀರೀಕ್ಷಕ ಶ್ರೀನಾಥ್ ಅವರಿಗೆ ಮನವಿ (Shivamogga News) ಸಲ್ಲಿಸಲಾಯಿತು.

ಇದನ್ನೂ ಓದಿ: TPL 3 : ಫೆ.28ರಿಂದ ಕ್ರಿಕೆಟ್ ಪಂದ್ಯಾವಳಿ ಶುರು, ಟ್ರೋಫಿ ಹಾಗೂ ಜೆರ್ಸಿ ಬಿಡುಗಡೆ

ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರು ಗ್ರಾಮಸ್ಥರು ಹಲವಾರು ವರ್ಷಗಳಿಂದ ಹೋರಾಟ ನೆಡೆಸುತ್ತಾ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.‌ ಅಕ್ರಮವಾಗಿ ಕಿರಾಣಿ ಅಂಗಡಿಯಲ್ಲಿ, ಹೋಟೇಲಿನಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ವ್ಯವಸ್ಥೆಯ ವಿರುದ್ಧ ಅಧಿಕಾರಿ ವರ್ಗದವರು ಸೂಕ್ತ ಕ್ರಮ ಕೈಗೊಂಡು ಹರೀಶಿ ಗ್ರಾಮದ ವ್ಯಾಪ್ತಿಗೆ ಬರುವ ಮದ್ಯದ ಅಂಗಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದರು. ಇಲ್ಲದಿದ್ದಲ್ಲಿ ಇದೇ ಫೆ. 23 ರಂದು ಹರೀಶಿ ಗ್ರಾಮ ಪಂಚಾಯಿತಿ ಎದುರು ಮತ್ತು ಹರೀಶಿ ಸರ್ಕಲ್ ನಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: IND vs ENG: ಸ್ಟನ್ನಿಂಗ್​ ಕ್ಯಾಚ್​ ಹಿಡಿದು ರೂಟ್​ಗೆ ಪೆವಿಲಿಯನ್​ ರೂಟ್​ ತೋರಿದ ಜೈಸ್ವಾಲ್

ಪ್ರತಿಭಟನೆಯಲ್ಲಿ ಅನುಪಮಾ, ರಷಿದಾಭಾನು, ನಾಗರತ್ನ, ಶಾರದಾ, ಜಯಶ್ರೀ, ಕಲಾ, ಗೌರಮ್ಮ, ಅನುರಾಧ, ಸುಮಲತಾ, ರೇಣುಕಮ್ಮ, ಕಮಲ, ರೇವತಿ, ಪ್ರೇಮಾ, ಕಲಾವತಿ, ಸಂಗೀತಾ, ಸುಧಾ, ನಿರ್ಮಲಾ, ಶಂಕರ, ಗಣೇಶ್, ರತ್ನಾಕರ ಸೇರಿ ಹಲವರು ಪಾಲ್ಗೊಂಡಿದ್ದರು.

Exit mobile version