Site icon Vistara News

Shivamogga News: ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸೊರಬ ಪುರಸಭೆ ಮುಖ್ಯಾಧಿಕಾರಿ ಸೂಚನೆ

Dengue fever control awareness campaign in soraba

ಸೊರಬ: ಡೆಂಗ್ಯೂ ಜ್ವರವು (Dengue fever) ವೈರಸ್‌ನಿಂದ ಉಂಟಾಗುವ ಸೊಳ್ಳೆಗಳಿಂದ ಹರಡುವ ಉಷ್ಣವಲಯದ ರೋಗವಾಗಿದ್ದು, ಸುತ್ತಮುತ್ತಲಿನ ಪರಿಸರವನ್ನು (Environment) ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಜಾಗೃತಿಯನ್ನು (Awareness) ಅನುಸರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ ಮತ್ತು ಪುರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ಜ್ವರ ನಿಯಂತ್ರಣ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Ballari News: ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿಗೆ ಕಂಚು, ಸಿರುಗುಪ್ಪದ ಧೋಬಿ ಕುಟುಂಬದಲ್ಲಿ ಬೆಳಗಿದ ಪ್ರತಿಭೆ

ಡೆಂಗ್ಯೂ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ಕಂಡು ಬರುತ್ತದೆ. ಸೋಂಕಿತರಿಗೆ ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ಚರ್ಮದಲ್ಲಿ ಗುಳ್ಳೆಗಳು ಕಾಣಿಸಬಹುದು. ಇದು ಗುಣಮುಖವಾಗಲು ಎರಡು ರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ರೋಗದಿಂದ ದೂರವಿರಲು ಸ್ವಚ್ಛತೆಯೊಂದೇ ದಾರಿಯಾಗಿದ್ದು, ಸಾರ್ವಜನಿರು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಕೊಳ್ಳಬೇಕು ಎಂದರು.

ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಶಬ್ಬೀರ್ ಖಾನ್ ಮಾತನಾಡಿ, ಡೇಂಗಿ ಜ್ವರ ವೈರಸ್‌ನಿಂದ ಹರಡುವ ಖಾಯಿಲೆ. ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೊಳ್ಳೆಗಳ ನಿಯಂತ್ರಣ ಒಂದೇ ಈ ರೋಗದ ಹತೋಟಿಗೆ ಮುಖ್ಯ ವಿಧಾನ. ಶೇಖರಣೆಯಾಗಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುರಿಂದ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಇದನ್ನೂ ಓದಿ: Shivamogga News: ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಗೆ ಶಿವಮೊಗ್ಗದ ಡಾ. ಆರ್‌. ಎಸ್‌. ವರುಣ್‌ಕುಮಾರ್‌ ಸೇರ್ಪಡೆ

ಜಾಥಾದಲ್ಲಿ ಪುರಸಭೆ ಆರೋಗ್ಯ ನರೀಕ್ಷಣಾಧಿಕಾರಿ ರಣಜಿತ್, ಚಂದನ್, ಸಮುದಾಯ ಆರೋಗ್ಯಾಧಿಕಾರಿ ಅಶ್ವಿನಿ, ಅಪೂರ್ವ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂ. ಸುನೀತಾ, ಆಶಾ ಮೇಲ್ವಿಚಾರಕಿ ಬಿ. ಶಿಲ್ಪಾ, ಸುಮಂಗಲಾ, ಪಾರ್ವತಿ, ನಾಗರತ್ನ, ಸುಮಿತ್ರಾ, ಲೀಲಾವತಿ, ಕೆರಿಯಮ್ಮ ಸೇರಿದಂತೆ ಇತರು ಉಪಸ್ಥಿತರಿದ್ದರು.

Exit mobile version