ಸೊರಬ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಿಂದ ಪಡೆದ ಮಂತ್ರಾಕ್ಷತೆಯನ್ನು (Manthrakshathe) ಪಟ್ಟಣದ ಶ್ರೀ ರಾಘವೇಂದ್ರ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ ಹಾಗೂ ದುರ್ಗಾವಾಹಿನಿಯಿಂದ ಮನೆ ಮನೆಗಳಿಗೆ ತೆರಳಿ ವಿತರಿಸಲಾಯಿತು.
5ನೇ ವಾರ್ಡ್‌ನ ಮನೆ ಮನೆಗಳಿಗೆ ಮಂತ್ರಾಕ್ಷತೆ ತಲುಪಿಸುವ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಮಧುರಾಯ್ ಜಿ. ಶೇಟ್ ಮಾತನಾಡಿದರು.
ಇದನ್ನೂ ಓದಿ: GST Collection : ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಭರ್ಜರಿ ಪ್ರಗತಿ
ಇದಕ್ಕೂ ಮೊದಲು ಪಟ್ಟಣದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ 12 ವಾರ್ಡ್‌ಗಳು ಸೇರಿದಂತೆ ಕೊಡಕಣಿ ಭಾಗಗಳ ಪ್ರಮುಖರು, ಪ್ರತಿ ಮನೆಮನೆಗಳಿಗೆ ಶ್ರೀರಾಮನ ಭಜನೆ ಮೂಲಕ ಮಂತ್ರಾಕ್ಷತೆ ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಶೀಕ್ ನಾಗಪ್ಪ, ಮಾತೃ ಮಂಡಳಿಯ ವಾಸಂತಿ ನಾವುಡಾ, ವೀಣಾ ಶ್ರೀಧರ್, ಮಮತಾ ಕಾಳಿಂಗರಾಜ್, ಅರ್ಚನಾ ಭಾಪಟ್, ಭಾರತಿ ಪ್ರವೀಣ್ ಭಂಡಾರಿ, ಶ್ರೀಮತಿ ಬೆನ್ನೂರು, ಸರಸ್ವತಿ ನಾವುಡಾ, ವಿನಯ ಪ್ರಶಾಂತ್ ಭಾಪಟ್, ಶ್ಯಾಮಲಾ ಸುರೇಶ್, ಪ್ರಮುಖರಾದ ನಾಗರಾಜ ಶೇಟ್, ಎಸ್.ಕೆ. ಭಟ್, ವಾಸುದೇವ ಉಡುಪ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: Koppala News: ರಸ್ತೆಗಳಿಗೆ ನದಿಗಳ ಹೆಸರಿಡುವ ಮೂಲಕ ಮಾದರಿಯಾದ ಚಿಕ್ಕಡಂಕನಕಲ್ ಗ್ರಾ. ಪಂ!
ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಡಾ. ಜ್ಞಾನೇಶ, ಕಾಳಿಂಗರಾಜ್, ರವಿಗುಡಿಗಾರ್, ನಾಗರಾಜ್ ಗುತ್ತಿ ಸೇರಿದಂತೆ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.