ಸೊರಬ: ಸರ್ಕಾರಿ ಶಾಲೆಗಳ (Government Schools) ಗುಣಮಟ್ಟ ಸುಧಾರಿಸಲು ಸಂಘ-ಸಂಸ್ಥೆ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಶಾಲೆಗಳಲ್ಲಿ ಶಿಕ್ಷಕ ವೃಂದ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಕಾರ್ಯತತ್ಪರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಎಂ. ಸತ್ಯನಾರಾಯಣ ಹೇಳಿದರು.
ಪಟ್ಟಣದ ಪಿಡಬ್ಲ್ಯೂಡಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೆರಿಕನ್ ಇಂಡಿಯಾ ಫೌಂಡೇಶನ್ ಹಮ್ಮಿಕೊಂಡಿದ್ದ ನೂರು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಯೋಜನೆ ಅಡಿಯಲ್ಲಿ ಗುರುವಾರ ವಿವಿಧ ಶಾಲೆಗಳಿಗೆ ನಲಿ-ಕಲಿ ಮಕ್ಕಳಿಗೆ ಮೇಜು ಹಾಗೂ ಕುರ್ಚಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದನ್ನೂ ಓದಿ: Ragi Face Pack: ಹೊಟ್ಟೆಗೆ ರಾಗಿ ಮುದ್ದೆ! ಬ್ಯೂಟಿಗೆ ರಾಗಿ ಫೇಸ್ ಪ್ಯಾಕ್!
ಅಮೆರಿಕನ್ ಇಂಡಿಯನ್ ಫೌಂಡೇಶನ್ ಉದಾತ್ತ ಚಿಂತನೆ ಅಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರ ನೀಡುತ್ತಿದೆ ಎಂದರು.
ಇದನ್ನೂ ಓದಿ: Viral Video: ಪೆಟ್ರೋಲ್ ದರದ ಚಿಂತೆ ಬಿಟ್ಹಾಕಿ; ಈ ಯುವಕನ ಐಡಿಯಾ ಫಾಲೋ ಮಾಡಿ!
ಕಾರ್ಯಕ್ರಮದಲ್ಲಿ ಅಮೆರಿಕನ್ ಇಂಡಿಯಾ ಫೌಂಡೇಶನ್ ತಾಲೂಕ ಸಂಚಾಲಕ ಎಂ. ಸೋಮಪ್ಪ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ದಯಾನಂದ್ ಕಲ್ಲೇರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮನೋಹರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್. ಸುರೇಶ್, ಮುಖ್ಯ ಶಿಕ್ಷಕಿ ವೈ. ಗೌರಮ್ಮ, ಹಾಲೇಶ್ ನವುಲೆ, ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ, ಶಿಕ್ಷಕ ರಮೇಶ್, ಅಮೆರಿಕನ್ ಇಂಡಿಯಾ ಫೌಂಡೇಶನ್‌ನ ದರ್ಶನ್ ಹಾಗೂ ರಘು ಭಂಡಾರಿ, ಕುಂದಗಸವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಂ.ಎಲ್. ನೋಪಿ ಶಂಕರ್, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ವೃಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.