Site icon Vistara News

Shivamogga News: ರೈತರಿಗಾಗಿ ವಿಶೇಷ ಯೋಜನೆಗಳು ಘೋಷಣೆಯಾಗಲಿ: ಜೆ.ಎಸ್. ಚಿದಾನಂದಗೌಡ

Farmers Day programme in Soraba

ಸೊರಬ: ಸರ್ಕಾರದಿಂದಲೇ ರೈತ ದಿನಾಚರಣೆ (Farmers Day) ಆಚರಿಸುವ ಮೂಲಕ ಉತ್ತಮ ಕೃಷಿ ಮಾಡಿದ ರೈತನನ್ನು ಗುರುತಿಸಬೇಕು. ಹಾಗೆಯೇ ರೈತರಿಗಾಗಿ ವಿಶೇಷ ಯೋಜನೆಗಳು ಘೋಷಣೆಯಾಗಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ತಿಳಿಸಿದರು.

ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಹಮ್ಮಿಕೊಂಡ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಡಿಗೆ ಅನ್ನ ನೀಡುವ ರೈತರ ಬಗ್ಗೆ ಆಳುವ ಸರ್ಕಾರಗಳು ಗಮನ ನೀಡುತ್ತಿಲ್ಲ. ರಾಜ್ಯದಲ್ಲಿ ರೈತಾಪಿ ವರ್ಗ ಸಂಕಷ್ಟದಲ್ಲಿ ಸಿಲುಕಿದೆ. ರಾಜ್ಯದಲ್ಲಿ ಅನೇಕ ಮಹನೀಯರ ದಿನಾಚರಣೆಗಳನ್ನು ಸರ್ಕಾರ ಅದ್ಧೂರಿಯಾಗಿ ಆಚರಿಸುತ್ತಿದೆ. ಅಂತೆಯೇ ದೇಶದ ಬೆನ್ನೆಲುಬಾದ ರೈತರ ದಿನವನ್ನು ಸಹ ಸರ್ಕಾರದಿಂದ ಆಚರಿಸಬೇಕು. ಅಂದು ಉತ್ತಮ ರೈತರಿಗೆ ಗುರುತಿಸುವ ಕೆಲಸವಾಗಬೇಕು ಎಂದರು.

ಇದನ್ನೂ ಓದಿ: KPTCL ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ: ವರದಿ ಸಲ್ಲಿಕೆಗೆ ಸಮಿತಿ ರಚನೆ

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಮಾತನಾಡಿ, ದೇಶ ಕಾಯುವ ಯೋಧ ಮತ್ತು ನಾಡಿಗೆ ಅನ್ನ ನೀಡುವ ರೈತರಿಗೆ ಗೌರವಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗದೆ. ಸರ್ಕಾರದಿಂದಲೇ ರೈತ ದಿನಾಚರಣೆಯಾಗಬೇಕು ಎಂದು ಒತ್ತಾಯ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಂಜುನಾಥ ಗುತ್ತಿ ಅವರ ರೈತ ಕ್ಯಾಂಟೀನ್ ಮೂಲಕ ಜನತೆಗೆ ಉಚಿತವಾಗಿ ಫಲಾಹಾರ ವಿತರಿಸಲಾಯಿತು.

ಇದನ್ನೂ ಓದಿ: Plane grounded : 303 ಭಾರತೀಯರಿದ್ದ ವಿಮಾನ ಫ್ರಾನ್ಸ್​ನಲ್ಲಿ ತುರ್ತು ಭೂಸ್ಪರ್ಶ

ಈ ವೇಳೆ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ವಿ. ದತ್ತಾತ್ರೇಯ, ಕಾರ್ಯದರ್ಶಿ ಶರತ್ ಸ್ವಾಮಿ, ಸದಸ್ಯರಾದ ಮಂಜುನಾಥ ಗುತ್ತಿ, ವಿನಯ, ದೀಪಕ್, ಎಸ್.ಪಿ. ನಾಗಪ್ಪ, ನಿತಿನ್ ಕುಮಾರ್, ಪ್ರಕಾಶ್, ಪ್ರಮುಖರಾದ ಶಿವಪ್ಪ ಕೊಡಕಣಿ, ತಾತಪ್ಪ, ಯುವರಾಜ ಕೊಡಕಣಿ, ಹಿರಿಯಣ್ಯಪ್ಪ ಕೊಡಕಣಿ, ನಿಂಗಪ್ಪ ಕೊಡಕಣಿ, ಬೆನಕೇಶಿ, ಮಾರುತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version